ತುಮಕೂರು:
ಕೆಎಸ್ ಆರ್ ಟಿ ಸಿ ಸಂಸ್ಥೆಗೆ ಸೇರಿದ ಬಸ್ ವೊಂದು ಮಗುಚಿ ಬಿದ್ದ ಘಟನೆ ತುಮಕೂರಿನ ಸಿರಾ ಬಳಿವರದಿಯಾಗದೆ.ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಸುಮಾರು 25 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶಿರಾ ತಾಲ್ಲೂಕಿನ ತಾಳಗುಂದ ಗ್ರಾಮದಿಂದ ಶಿರಾಗೆ ಬರುತ್ತಿದ್ದ ಬಸ್ ಅರೇಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಸುಮಾರು 25 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಿಕ್ಕಗೂಳ ಗ್ರಾಮದ ನಾಗಮ್ಮ, ಸಿದ್ದಗಂಗಪ್ಪ ಹಾಗೂ ಬಡವನಹಳ್ಳಿ ಗ್ರಾಮದ ಹೊನ್ನಪ್ಪ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರಿಗೆ ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.