ಟೀಶರ್ಟ್ ಗಳ ಮೇಲಿನ ಹೇಳಿಕೆಗಳು ಇತರರಿಗೆ ನೋವುಂಟು ಮಾಡದಂತಿರಲಿ

ಹರಪನಹಳ್ಳಿ :

      ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೆ ಕೊಟ್ಟ ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತರಾದವರಲ್ಲ. ಆಚರಣೆ ನೆಪದಲ್ಲಿ ಟೀಶರ್ಟ್‍ಗಳ ಮೇಲೆ ಬರೆದುಕೊಳ್ಳುವ ಹೇಳಿಕೆಗಳು ಇನ್ನೊಂದು ಸಮಾಜವನ್ನು ಕೆಣಕುವ, ನೋವುಂಟು ಮಾಡುವಂತಿರಬಾರದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸರ್ಕಾರವನ್ನು ಹೇಳಿದರು.

      ತಾಲೂಕಿನ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗದಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

      ದೇಶದ ಪ್ರತಿಯೊಬ್ಬ ವರ್ಗ, ಧರ್ಮ, ಜಾತಿಯವರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶವನ್ನು ಪಾಲಿಸಬೇಕು. ಒಳ್ಳೆಯವರು ಮೌನವಹಿಸಿದ್ದರಿಂದ ದೇಶ ಅಧಃಪತನಕ್ಕೆ ಹೋಗುತ್ತಿದೆ, ದೇಶದ ಸ್ಥಿತಿ ಹದಗೆಡಲು ಕೆಟ್ಟವರು ಕಾರಣರಲ್ಲ. ರಾಯಣ್ಣನ ಭಾವಚಿತ್ರವನ್ನು ಅವರ ದಿನೋತ್ಸವದಂದು ಎಲ್ಲ ಕಚೇರಿಗಳಲ್ಲೂ ಪೂಜಿಸುವಂತೆ ಆದೇಶಿಸಬೇಕು, ಜಯಂತಿಗೆ ರಜೆ ಕೊಡುವ ಅಗತ್ಯವಿಲ್ಲ ಎಂದು ಸರ್ಕಾರವನ್ನು ಒತ್ತಾಯಿಸಿದರು.

      220 ವರ್ಷಗಳ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸುಮ್ಮನೆ ಕುಳಿತಿದಿದ್ದರೆ ಬಹುಶಃ ಭಾರತಕ್ಕೆ ಸ್ವಾತಂತ್ರ್ಯ ಬೇಗ ಸಿಗುತ್ತಿರಲಿಲ್ಲ. ಕೆಲ ನಾಯಕರು, ಜನರು ನಮಗ್ಯಾಕೆ ಎನ್ನುವ ಮನೋಭಾವದಿಂದ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಗಳು ಹಾಳಾಗುತ್ತಿವೆ. ಕೆಟ್ಟ ತಳಿ ಇರುವಲ್ಲಿ ಖಂಡಿಸುವ ಯುವಕರು ರಾಯಣ್ಣನಂತೆ ಸಿಡಿದೇಳುವವರೆಗೂ ದೇಶದಲ್ಲಿ ಭ್ರಷ್ಟಾಚಾರದಲ್ಲಿ ತಾಂಡವಾಡುತ್ತಿದೆ ಎಂದರು.

      ರಾಯಣ್ಣನ ಅಂದಿನ ಆಲೋಚನೆಗಳು ದೂರದೃಷ್ಟಿ ಹೊಂದಿದ್ದವು. ಅಂದು ಗಲ್ಲಿಗೇರಿಸುವ ಸಂದರ್ಭದಲ್ಲಿ ಕರುನಾಡಿನಲ್ಲಿ ಒಬ್ಬೊಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ ಎಂದು ಹೇಳಿದ್ದ. 1947ರಲ್ಲಿ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಬ್ರಿಟೀಷರು ದೇಶಬಿಟ್ಟು ತೊಲಗುವ ಕಾರ್ಣಿಕ ನುಡಿದಿತ್ತು. ಅದೇ ವರ್ಷ ಭಾರತಕ್ಕೆ ಸ್ವಾತಂತ್ರ್ಯೋತ್ಸವ ಸಿಕ್ಕು ರಾಯಣ್ಣನ ಮಾತು, ಮೈಲಾರ ಕಾರ್ಣಿಕ ಸತ್ಯವಾಯಿತು. ಆಗಾಗಿ ಇಂದು ಹೋರಾಟಗಾರ ರಾಯಣ್ಣ ಇಂದು ಎಲ್ಲರಿಗೂ ಆದರ್ಶವಾಗಿದ್ದಾನೆ ಎಂದು ತಿಳಿಸಿದರು.

      ಅಧ್ಯಕ್ಷತೆವಹಿಸಿದ್ದ ಕುರುಬ ಸಮಾಜದ ತಾಲೂಕು ಅಧ್ಯಕ್ಷ ವೈಕೆಬಿ ದುರುಗಪ್ಪ ಮಾತನಾಡಿ, ರಾಯಣ್ಣ ಹುಟ್ಟಿದ ದಿನ ಆ.15 ಆಗಿದೆ, ಸಾವನ್ನಪ್ಪಿದ್ದು ಜನವರಿ-26 ಆಗಿದೆ. ಅವರ ಜನನ-ಮರಣದಲ್ಲಿಯೇ ದೇಶಭಕ್ತಿ ಅಪಾರವಾಗಿ ಕಾಣಿಸುತ್ತಿದೆ ಎಂದು ರಾಯಣ್ಣನ ಹೋರಾಟ ಸ್ಮರಿಸಿದರು.

      ಶ್ರೀಗಳನ್ನು ರಥೋತ್ಸªದಲ್ಲಿ ಕೂರಿಸಿ, ಡೊಳ್ಳು, ಸಕಲ ವಾಧ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಆವರಗೊಳ್ಳ ವೀರಭದ್ರೇಶ್ವರ ಡೊಳ್ಳಿನ ಯುವಕ ಸಂಘ, ನಾಗೇನಹಳ್ಳಿ ಬೀರಲಿಂಗೇಶ್ವರ ಸಾಂಸ್ಕøತಿಕ ಯುವಕ ಸಂಘದಿಂದ ಭಜನೆಗಳು ಜರುಗಿದವು. ರಾತ್ರಿ ಭದ್ರಾವತಿ ಅರ್ಕೆಸ್ಟ್ರಾದಿಂದ ರಸಮಂಜರಿ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ದಿ.ಅಟಲ್‍ಬಿಹಾರಿ ವಾಜಪೇಯಿ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

      ಜಿ.ಪಂ.ಅಧ್ಯಕ್ಷೆ ಕೆ.ಆರ್.ಜಯಶೀಲ, ಮಾಜಿಅಧ್ಯಕ್ಷ ಕಲ್ಲೇರ ಬಸವರಾಜ್, ಚಿರಸ್ಥಹಳ್ಳಿ ಬಸಣ್ಣ, ಯಡಿಹಳ್ಳಿ ಶೇಖರಪ್ಪ, ಗ್ರಾ.ಪಂ.ಅಧ್ಯಕ್ಷೆ ಜ್ಯೋತೆಮ್ಮ, ಸಂತೋಷ್, ಎ.ನಾಗರಾಜ್, ಪರಶುರಾಮ್, ಅಂಜಿನಪ್ಪ, ಕೊಳಚಿ ಬಸವರಾಜ್, ಕೆ.ಮಲ್ಲಪ್ಪ, ದ್ಯಾಮಪ್ಪ, ಎಂ.ಮಲ್ಲಪ್ಪ ಹಾಗೂ ರಾಯಣ್ಣನ ಬಳಗದ ಪದಾಧಿಕಾರಿಗಳಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap