ಸಂತ್ರಸ್ಥರಿಗಾಗಿ ದೇಣಿಗೆ ಸಂಗ್ರಹ

ಬುಕ್ಕಾಪಟ್ಟಣ 

                          ಬುಕ್ಕಾಪಟ್ಟಣ ಗ್ರಾಮದಲ್ಲಿ ದಿನಾಂಕ 27-08-2018 ರಂದು ಶ್ರೀ ಚಾನೆಲ್ ಮತ್ತು ವಿಜಯವಾಣಿ ಪತ್ರಿಕೆ ಸಂಯೋಗದೊಂದಿಗೆ, ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕೊಡಗು ನೆರೆ ಸಂತ್ರಸ್ತರಿಗೆ ಸಹಕರಿಸುವ ಉದ್ದೇಶದಿಂದ ದೇಣಿಗೆ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಚಾನೆಲ್ ಮಾಲಿಕರ ಸಹಿತವಾಗಿ, ಚಾನೆಲ್‍ನ ಸಿಬ್ಬಂದಿ ವರ್ಗದವರು, ಬುಕ್ಕಾಪಟ್ಟಣ ವರದಿಗಾರರು ಹಾಗೂ ಮುಖಂಡರಾದ ಶ್ರೀ ಚಂದ್ರಶೇಖರ್.ಬಿ.ಎನ್. ರವರ ರೂಪುರೇಷೆಯಂತೆ ನಿಧಿ ಸಂಗ್ರಹ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರು, ಸಹಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ರೆಡ್ ಕ್ರಾಸ್ ಅಡಿಯಲ್ಲಿ ನಿಧಿ ಸಂಗ್ರಹಕ್ಕೆ ಸಾಥ್ ನೀಡಿದರು. ಬುಕ್ಕಾಪಟ್ಟಣ ಗ್ರಾಮಸ್ಥರು, ಸುತ್ತಮುತ್ತಳಿನ ಹಳ್ಳಿ ಜನರು, ಅಂಗಡಿ ಮಾಲಿಕರುಗಳು ಸಹ ಸದರಿ ಉದ್ದೇಶಿತ ನಿಧಿಗೆ ತಮ್ಮ ಕೈಲಾದಷ್ಟು ಸ್ವ ಇಚ್ಛೆಯಿಂದ ಧನ ಸಹಾಯ ಮಾಡಿ, ಕೊಡಗಿನ ಜನತೆಯ ಜೊತೆಗೆ ನಾವೀದ್ದೇವೆ ಎಂಬು ಸಂದೇಶ ನೀಡಿದರು. ಈ ಕಾರ್ಯದ ಮೂಲಕ ಶ್ರೀ ಚಾನೆಲ್ ಮತ್ತು ವಿಜಯವಾಣಿ ದಿನಪತ್ರಿಕೆ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿತು. ಗ್ರಾಮದ ಮುಖಂಡರು ಸಕಾತ್ಮಕವಾಗಿ ಸ್ಪಂದಿಸಿದರು. ಬುಕ್ಕಾಪಟ್ಟಣದ ಕಾಲೇಜು ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ನಿಧಿ ಸಂಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap