ಪಾವಗಡ;-
ಟೊಮೋಟೊ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ಅಗ್ರಹಿಸಿ ತಾಲೂಕಿನ ರೈತರು ಹಾಗೂ ವಿವಿಧ ಸಂಘಟನೆಗಳು ತಾಲ್ಲೂಕು ಕಛೇರಿ ಮುಂದೆ ಟೊಮೋಟೊ ಹಾಕಿ ಪ್ರತಿಭಟಿಸಿದರು.
ಬುಧವಾರ ಪಾವಗಡ ತಾಲ್ಲೂಕು ಕಛೇರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ರೈತರು ಕಛೇರಿ ಮುಂದೆ ಟೊಮೋಟೊ ಸುರಿದು ಜಿಲ್ಲಾಧಿಕಾರಿ ಗಮನಕ್ಕೆ ತಂದು ರೈತರ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು,ರೈತರು ಲಕ್ಷಾಂತರ ಖರ್ಚು ಮಾಡಿ ಮಾರುಕಟ್ಟೆಗೆ ತಂದರೆ ಇಲ್ಲಿ ಒಂದು ಬಾಕ್ಸ್ 20ರಿಂದ30 ರೂಗಳಿಗೆ ಕೇಳುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡೆಸಿದ್ದರು.
ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ ಪಾವಗಡ ತಾಲ್ಲೂಕಿನಲ್ಲಿ ಅಲ್ಪ ಸ್ವಲ್ಪ ಬರುವ ನೀರಿನಲ್ಲಿ ಕೆಲ ರೈತರು ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ದಲ್ಲಾಳಿಗಳಿಂದ ಮಾರುಕಟ್ಟೆ ಕುಸಿದಿದೆ ಎಂದು ಮೋಸ ಮಾಡುತ್ತಿದ್ದಾರೆ ಎಂದು ಅಗ್ರಹಿಸಿದರು.
ರೈತ ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು,ಪಾವಗಡ ತಾಲ್ಲೂಕು ಬರ ಪೀಡಿತ ಪ್ರದೇಶವಾಗಿದ್ದು,ಇದುವರಿಗೂ ಮಳೆ ಇಲ್ಲದೆ ಇಲ್ಲಿನ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ,ಸರ್ಕಾರ ಇವೇಲ್ಲವನ್ನು ಗಮನಿಸಿ ಹೆಚ್ಚು ಒತ್ತು ಕೊಡಬೇಕೆಂದು ಒತ್ತಾಯಿಸಿದ್ದಾರೆ.
ರೈತ ಸಂಘದ ರಾಜ್ಯಾಧ್ಯಕ್ಷ ನಾಗಬೂಷಣರೆಡ್ಡಿ ಮಾತನಾಡಿ ಸುಮಾರು ವರ್ಷಗಳಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಕ್ಕೆ ಹೋರಾಟದ ಮುಖಾಂತರ ತಂದಿದ್ದೇವೆ ಅದರೆ ಇದುವರಿಗೂ ಪಾವಗಡ ತಾಲ್ಲೂಕನ್ನು ರಾಜ್ಯ ಸರ್ಕಾರ ನಿರ್ಲಕ್ಷ ದೊರಣೆ ಮಾಡುತ್ತಿದ್ದು,ಶೇಂಗಾ ಬೆಳೆ ಇಟ್ಟರೆ ಮಳೆ ಬರದೆ ಬೆಳೆ ಸಹ ಅಗದೆ ಸಾಲಗಾರರಾಗಿ ರೈತರು ನೊಂದಿದ್ದು,ಇಗ ಪರ್ಯಾಯ ಬೆಳೆಯಾಗಿ ಟೊಮೋಟೊ ಬೆಳೆ ಇಟ್ಟು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 20 ರಿಂದ 30 ರೂಗಳಿಗೆ ಕೇಳುತ್ತಾರೆ ಇನ್ನು ರೈತ ಯಾವ ಬೆಳೆ ಬೆಳೆದರೆ ನಿಗದಿ ಬೆಲೆ ಸಿಗುತ್ತದೆ ಇಲ್ಲದಿದ್ದರೆ ರೈತ ಮಾಡಬೇಕಾದ ಕೆಲಸ ವೇನು?ಸರ್ಕಾರ ಗಮನ ಹರಿಸಿ ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದ್ದರು.
ಜಿಲ್ಲಾಧಿಕಾರಿ ಡಾ;ರಾಕೇಶ್‍ಕುಮಾರ್ ಮನವಿ ಪತ್ರ ಪಡೆದು ಮಾತನಾಡಿ ರೈತ ನೀಡಿದ ಮನವಿಯನ್ನು ಸರ್ಕಾರ ಗಮನಕ್ಕೆ ತರುವುದಾಗಿ ತಿಳಿಸಿ ರೈತರ ಬೆಳೆದ ಟೊಮೋಟೊ ಪರಿಶೀಲಿಸಿ ವರಧಿ ನೀಡಬೆಕೆಂದು ತಹಶಿಲ್ದಾರ್ ವರದರಾಜುರವರಿಗೆ ಅದೇಶಿಸಿದರು.
ಈ ಸಂದರ್ಭದಲ್ಲಿ ಉವಿಭಾಗಧಿಕಾರಿ ವೆಂಕಟೇಶಯ್ಯ,ಮಹಾ ಮಾದಿಗ ಹೋರಾಟ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ,ಶ್ರೀನಿವಾಸ್,ಪಳವಳ್ಳಿ ಗ್ರಾಮದ ನೊಂದ ರೈತ ಚಿಕ್ಕಸುಬ್ಬರಾಯಪ್ಪ ಹಾಗೂ ವಿವಿಧ ಸಂಘಟನೆಗಳ ಪಧಾಧಿಕಾರಿಗಳು ಮತ್ತು ರೈತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
