ರಷ್ಯಾ:
ದಿನೇ ದಿನೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತಾರಕಕ್ಕೇರುತ್ತಿದೆ. ಇಂದು 7ನೇ ದಿನಕ್ಕೆ ಕಾಲಿಟ್ಟಿರುವ ಯುದ್ಧದ ನಡುವೆಯೂ 3ನೇ ಮಹಾಯುದ್ಧ ಫಿಕ್ಸ್ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೂರನೇ ಮಹಾಯುದ್ಧ ನಡೆದ್ರೇ, ಪರಮಾಣು ಬಾಂಬ್ ಸ್ಪೋಟ ಕೂಡ ಆಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಈ ಬಗ್ಗೆ ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲಾವ್ರೋವ್ ಅವರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಮೂರನೇ ಮಹಾಯುದ್ಧ ನಡೆದರೆ, ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಮತ್ತೊಂದೆಡೆ, ರಷ್ಯಾ ದಾಳಿಯಿಂದ ಉಕ್ರೇನ್ ಅಕ್ಷರ ಶಹ ನಲುಗಿ ಹೋಗಿದೆ. 7ನೇ ದಿನಕ್ಕೆ ಉಕ್ರೇನ್-ರಷ್ಯಾ ನಡುವಿನ ಯುದ್ಧ ಮುಂದುವರೆದಿದೆ. ಈ ನಡುವೆ 6ನೇ ದಿನದ ಯುದ್ಧದ ಸಂದರ್ಭದಲ್ಲಿ ರಷ್ಯಾದ 6 ಸಾವಿರ ಯೋಧರನ್ನು ಹತ್ಯೆಗೈದಿರೋದಾಗಿ ಉಕ್ರೇನ್ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಅವರು, ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಉಕ್ರೇನ್ ಪ್ರತಿ ದಾಳಿಯಿಂದಾಗಿ ರಷ್ಯಾದ ಸುಮಾರು 6 ಸಾವಿರ ಯೋಧರು ಸಾವನ್ನಪ್ಪಿರೋದಾಗಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಶೆಲ್ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. 112 ಜನರು ಗಾಯಗೊಂಡಿದ್ದಾರೆ ಎಂದು ನಗರ ಮೇಯರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
