ಕಾನೂನು ಪದವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರು ಅರೆಸ್ಟ್​

ಬೆಂಗಳೂರು

    ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಲಾರದ ಬಸವ ಶ್ರೀ ಕಾನೂನು ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ನಾಗರಾಜ್, ವರೂಣ್ ಮತ್ತು ಜಗದೀಶ್ ಬಂಧಿತ ಆರೋಪಿಗಳು. ಜನವರಿ 22ರಂದು ನಡೆಯಬೇಕಿದ್ದ ಕಾನೂನು ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು.

    ಸೋರಿಕೆಯಾದ ಪ್ರಶ್ನೆಪತ್ರಿಕೆ ಹಲವಾರು ಜನರ ವಾಟ್ಸಾಪ್​ ಮತ್ತು ಟೆಲಿಗ್ರಾಂನಲ್ಲಿ ಹರಿದಾಡಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ಕೈವಾಡವನ್ನು ಬಯಲಿಗೆ ಎಳೆದಿದ್ದಾರೆ. 

   ಡಾ. ನಾಗರಾಜ್​ ಮೂಲಕ ಮೊದಲಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಡಾ. ನಾಗರಾಜ್​ ಪ್ರಶ್ನೆಪತ್ರಿಕೆಯ ಸೀಲ್ಡ್ ಕವರ್ ತೆರೆದು, ಪ್ರಶ್ನೆಪತ್ರಿಕೆ ಫೋಟೊ ತೆಗೆದು ಮೊಬೈಲ್​ನಲ್ಲಿ ಇಟ್ಟುಕೊಂಡಿದ್ದರು. ಬಳಿಕ, ಅದೇ ಕಾಲೇಜಿನ ಕಾನೂನು ವಿದ್ಯಾರ್ಥಿ ವರೂಣ್, ಡಾ ನಾಗರಾಜ್ ಮೊಬೈಲ್​ನಿಂದ ಪ್ರಶ್ನೆಪತ್ರಿಕೆಯನ್ನು ತನ್ನ ಮೊಬೈಲ್​ಗೆ ಶೇರ್ ಮಾಡಿಕೊಂಡಿದ್ದಾನೆ. ಬಳಿಕ ವರುಣ್​ ಪ್ರಶ್ನೆಪತ್ರಿಕೆಯನ್ನು ಜಗದೀಶ್​ಗೆ ಕಳಿಸಿದ್ದಾನೆ. ಇಬ್ಬರ ಕೈಗೆ ಪ್ರಶ್ನೆಪತ್ರಿಕೆ ಬಂದ ಬಳಿಕ ಹಲವಾರು ಜನರಿಗೆ 500 ರೂಪಾಯಿಂದ 10ಸಾವಿರ ರೂ. ತನಕ ಇಬ್ಬರೂ ಮಾರಾಟ ಮಾಡಿದ್ದಾರೆ ಎಂದು ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ. ಸಿಸಿಬಿ ಸೈಬರ್​ ಕ್ರೈಮ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Recent Articles

spot_img

Related Stories

Share via
Copy link