ಬೆಂಗಳೂರು :
ಚಿತ್ರರಂಗದಲ್ಲಿ ಒಬ್ಬರಾದ ಬಳಿಕ ಒಬ್ಬರು ಲೈಂಗಿಕ ಕಿರಕುಳ, ದೌರ್ಜನ್ಯದ ಆರೋಪ ಮಾಡುತ್ತಿದ್ದಾರೆ. ನಿರ್ಮಾಪಕರು, ನಟರ ವಿರುದ್ಧ ಹಲವು ನಟಿಯರ ವಿರುದ್ಧ ಈ ರೀತಿಯ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈಗ ಮುಂಬೈ ಮೂಲದ ಕಾದಂಬರಿ ಜೆತ್ವಾನಿ ಅವರು ಆಂಧ್ರ ಪ್ರದೇಶದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಈ ಸಂಬಂಧ ಆ ಮೂವರನ್ನು ಅಮಾನತು ಮಾಡಲಾಗಿದೆ.
ಕಾದಂಬರಿ ಅವರು ಕನ್ನಡದಲ್ಲಿ ‘ಊಜಾ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲಿ ‘ಆಟ’, ಮಲಯಾಳಂನಲ್ಲಿ ‘ಐ ಲವ್ ಯೂ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದರ ಜೊತೆಗೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಅವರು ಈಗ ಮುಂದೆ ಬಂದು ಈ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಕಾನೂನು ಬಾಹೀರವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಅಮಾನತುಗೊಂಡ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಪರಾಧವನ್ನು ದಾಖಲಿಸುವ ಮೊದಲೇ ನಟಿಯನ್ನು ಬಂಧಿಸಲು ಆದೇಶ ನೀಡಿದ್ದರು. ಸರಿಯಾದ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸದೆ ಈ ಮೌಖಿಕ ಸೂಚನೆಗಳನ್ನು ಪಾಲಿಸಿದ್ದಕ್ಕಾಗಿ ಮತ್ತೋರ್ವ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಮತ್ತೋರ್ವ ಅಧಿಕಾರಿಯಿಂದಲೂ ಅಧಿಕಾರದ ದುರುಪಯೋಗ ಆಗಿರೋದು ಕಂಡು ಬಂದಿದೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ.
