ಡಂಡೀ ವಿ.ವಿ.ಗೆ ರಾಜ್ಯದ 3 ವಿ.ವಿ.ಗಳ ವಿದ್ಯಾರ್ಥಿಗಳು :ಸಚಿವ

ಬೆಂಗಳೂರು

     ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಬೆಳೆಸಬೇಕೆಂಬ ಎನ್‌ಇಪಿ ಗುರಿಗೆ ಪೂರಕವಾಗಿ ಯುನೈಟೆಡ್ ಕಿಂಗ್‌ಡAನ ಡಂಡೀ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ನಡೆಸಲು ಆಯ್ಕೆಯಾಗಿರುವ ರಾಜ್ಯದ 3 ವಿ.ವಿ.ಗಳ ಆಯ್ದ ಪ್ರತಿಭಾವಂತ 15 ವಿದ್ಯಾರ್ಥಿಗಳ ತಂಡವನ್ನು ಅಲ್ಲಿಗೆ ಕಳಿಸಿಕೊಡುವ ಕಾರ್ಯಕ್ರಮ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆಯಿತು.

     ಈ ಮೂಲಕ ‘ಜನಜೀವನದಲ್ಲಿ ಪರಿವರ್ತನೆ: ಕರ್ನಾಟಕ, ಡಂಡೀ & ಬಿಯಾಂಡ್’ ಉಪಕ್ರಮಕ್ಕೆ ಅವರು ಚಾಲನೆ ನೀಡಿದರು. ಈ ಯೋಜನೆಯಡಿ ರಾಜ್ಯದ ಗುಲ್ಬರ್ಗ, ಯುವಿಸಿಇ ಮತ್ತು ಬೆಂಗಳೂರು ಕೃಷಿ ವಿ.ವಿ.ಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು.

     ಗುಲ್ಬರ್ಗ ವಿವಿ ತಂಡವು ಕಲಬುರಗಿ ಭಾಗದ ಬುಡಕಟ್ಟು ಜನರಲ್ಲಿ ಇರುವ ಆಂಟಿಮೈಕ್ರೋಬಯಲ್ ನಿರೋಧಕ ಶಕ್ತಿ ಕುರಿತು, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿAಗ್ ಕಾಲೇಜು ಡೀಸೆಲ್ ಬದಲು ಪ್ಲಾಸ್ಟಿಕ್ ತೈಲ ಮತ್ತು ಬಳಸಲ್ಪಟ್ಟಿರುವ ಖಾದ್ಯ ತೈಲವನ್ನು ಪರ್ಯಾಯ ಇಂಧನವಾಗಿ ಬಳಸುವ ಸಾಧ್ಯತೆ ಮತ್ತು ಬೆಂಗಳೂರು ಕೃಷಿ ವಿ.ವಿ.ಯು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೋಲಾರ್ ಸೆನ್ಸಾರ್ ಆಧಾರಿತ ನೀರಾವರಿ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ಸಂಶೋಧನೆ ನಡೆಸಲಿವೆ” ಎಂದರು.

    ಇದರ ಪ್ರಕಾರ, ಈ ಮೂರೂ ವಿ.ವಿ.ಗಳ ತಂಡಗಳು ಡಂಡೀ ವಿ.ವಿ. ನಡೆಸಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಇದು ನಮ್ಮ ವಿದ್ಯಾರ್ಥಿಗಳ ಜಾಣ್ಮೆ, ನಾವೀನ್ಯತೆಯ ಕೌಶಲ್ಯಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಮಾರ್ಚ್ನಿಂದ ಜೂನ್‌ವರೆಗೆ ನಾಲ್ಕು ತಿಂಗಳು ಈ ಯೋಜನೆಗಳು ಚಾಲ್ತಿಯಲ್ಲಿ ಇರಲಿದ್ದು, ನಂತರ ಈ ತಂಡಗಳು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿವೆ. ಇದಕ್ಕೆ ಆಗುವ ವೆಚ್ಚವನ್ನು ಬ್ರಿಟಿಷ್ ಕೌನ್ಸಿಲ್, ಡಂಡೀ ವಿವಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತುಗಳು ಭಾಗಶಃ ಭರಿಸಲಿವೆ ಎಂದು ಅವರು ತಿಳಿಸಿದರು.

   ಸ್ಪರ್ಧೆಯಲ್ಲಿ ವಿಜೇತವಾಗುವ ತಂಡದ ಪ್ರತಿ ವಿದ್ಯಾರ್ಥಿಗೂ ತಲಾ ಗರಿಷ್ಠ 6 ಸಾವಿರ ಪೌಂಡ್ ಶಿಷ್ಯವೇತನ ಸಿಗಲಿದ್ದು, ಒಂದು ವರ್ಷದ ಅವಧಿಯ ಸ್ನಾತಕೋತ್ತರ ಕೋರ್ಸಿಗೆ ಅಲ್ಲೇ ಪ್ರವೇಶಾತಿ ಪಡೆಯಬಹುದು. ನೂತನ ಶಿಕ್ಷಣ ನೀತಿಯು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತರುತ್ತಿರುವ ಗುಣಾತ್ಮಕ ಬದಲಾವಣೆಗೆ ಇದು ನಿದರ್ಶನವಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು.

     ರಾಜ್ಯದ ಶೈಕ್ಷಣಿಕ ಸುಧಾರಣೆಗೆ ಬ್ರಿಟಿಷ್ ಕೌನ್ಸಿಲ್ ಕಳೆದ ಒಂದು ದಶಕದಿಂದಲೂ ಕೈ ಜೋಡಿಸಿದೆ. ರಾಜ್ಯ ಸರಕಾರವು ಕೂಡ ಈ ಕ್ಷೇತ್ರದಲ್ಲಿ ದೀರ್ಘಾವಧಿ ಪರಿಣಾಮ ಉಂಟುಮಾಡುವAತಹ ಉಪಕ್ರಮಗಳನ್ನು ಕೈಗೊಂಡಿದೆ. ನಮ್ಮ ಯುವಜನರು ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸುವಂತೆ ಈ ಮೂಲಕ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತ ನಿರ್ದೇಶಕ ಜನಕ ಪುಷ್ಪನಾಥನ್ ಮಾತನಾಡಿ, “ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಬೋಧಕರಿಗೆ ಹೊಸಹೊಸ ಕೌಶಲ್ಯಗಳು, ಸಂಪನ್ಮೂಲಗಳು ಮತ್ತು ವೈಧಾನಿಕತೆಗಳನ್ನು ಕಲಿಸುವುದು ಈ ಒಡಂಬಡಿಕೆಯ ಗುರಿಯಾಗಿದೆ. ಇದು ರಾಜ್ಯದ ಶೈಕ್ಷಣಿಕ  ಮತ್ತು ಆರ್ಥಿಕ ಬೆಳವಣಿಗೆಗೆ ಇಂದು ಕೊಡಲಿದೆ. ಇದರಿಂದ ಯುವಜನರಿಗೆ ಭಾರೀ ಲಾಭವಾಗಲಿದೆ” ಎಂದರು.

    ಕಾರ್ಯಕ್ರಮದಲ್ಲಿ ಡಂಡೀ ವಿ.ವಿ.ದ ಉನ್ನತಾಧಿಕಾರಿಗಳಾದ ಪ್ರೊ.ಹರಿ ಹುಂಡಾಲ್, ಪ್ರಿ.ಡೈಸ್ ಡೇವಿಡ್‌ಸನ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ, ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ್, ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ, ಯುವಿಸಿಇ ಪ್ರಭಾರಿ ಪ್ರಿನ್ಸಿಪಾಲ್ ಪ್ರೊ.ದೀಪಾ ಶೆಣೈ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap