ತುಮಕೂರು:
ತುಮಕೂರಿನ 30 ನೇ ವಾರ್ಡ್‍ಗಳಾದ ವಿಜಯನಗರ. ಸಪ್ತಗಿರಿ ನಗರ, ರಾಘವೇಂದ್ರ ನಗರ, ಕೆ.ಇ.ಬಿ.ಲೇಔಟ್ ದೇವನೂರು ಚರ್ಚ್, ಚೆನ್ನಪ್ಪನಪಾಳ್ಯ ಹೀಗೆ ಹಲವರು ನಗರಗಳಲ್ಲಿ ಸಮಾಜಸೇವೆ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯಗಳು ಮೂಡಿ ಬಂದಿದೆ. ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಧುಮಿಕಿದ್ದೇನೆ. ಎಲ್ಲಾ ಮುಖಂಡರುಗಳನ್ನು ಸಭೆ ಕರೆದು ಒಮ್ಮತದಿಂದ ನನ್ನ ಗೆಲುವಿಗೆ ಶ್ರಮಿಸುವುದಾಗಿ ಕೇಳಿಕೊಂಡಿದ್ದೇನೆ. ವಾರ್ಡ್‍ಗಳಲ್ಲಿ ಸ್ವಚ್ಛತೆಯಿಂದ ಕೆಲಸ ಕಾರ್ಯಗಳು ನಡೆಯುತ್ತವೆ ಎಂದು ಟಿ.ಎನ್.ಚಂದನ್‍ಕುಮಾರ್‍ರವರು ತಿಳಿಸಿದ್ದಾರೆ.
ನಗರದ ವಿಜಯನಗರ ವಾರ್ಡ್ ನಂ 30 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನನ್ನದೇ ಆದ ಕನಸನ್ನು ಕಟ್ಟಿ ಕೊಂಡಿರುವೇ 30 ನೇ ವಾರ್ಡ್ ಅಭಿವೃದ್ಧಿಗಾಗಿ ನಮ್ಮ ಹಿಂದಿನ ಮಹಾನಗರ ಪಾಲಿಕೆ ಸದಸ್ಯರಾದ ಪಟೇಲ್ ನಾಗರಾಜ್, ಮಾಜಿ ನಗರಸಭೆ ಸದಸ್ಯರಾದ ಕ್ಯಾತಯಿಣಿ ರವೀಶ್‍ರವರ ಸಲಹೆಯ ಸಹಕಾರದಿಂದ ಪಡೆದು ಹಾಗೂ ಎಲ್ಲಾ ಮತ ಭಾಂದವರು ಅಭಿಪ್ರಾಯವನ್ನು ಪಡೆದು 30 ನೇ ವಾರ್ಡ್ ಅಭಿವೃದ್ಧಿಗೆ ದುಡಿಯುವ ಪಣ ತೊಟ್ಟಿರುವೇ 1989 ರಿಂದಲೂ 30 ನೇ ವಾರ್ಡ್‍ಗಳಲ್ಲಿಯೇ ಮನೆಯನ್ನು ಹೊಂದಿ ಇಲ್ಲಿಯೇ ವಾಸವಾಗಿರುವುದರಿಂದ ಈ ವಾರ್ಡ್‍ನ ಜನರ ಪರಿಚಯ ಇಲ್ಲಿನ ಸಮಸ್ಯೆ ನನಗೆ ಅರ್ಥವಾಗಿದೆ ಎಂದು ತಿಳಿಸಿದರು.
ಟಿ.ಎನ್. ಚಂದನ್‍ಕುಮಾರ್ ವಾರ್ಡ್30 ರಲ್ಲಿ ಟ್ಯಾಕ್ಟರ್ ಚಿನ್ನೆಯೊಂದಿಗೆ ಸ್ಥಳೀಯ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಈವರೆಗೆ 30 ನೇ ವಾರ್ಡ್‍ನಿಂದ ಕಾಂಗ್ರೇಸ್ ಅಭ್ಯರ್ಥಿಯಾಗುತ್ತಿರುವುದಾಗಿ ಹೇಳುತ್ತಿದ್ದ ಚಂದನ್‍ಕುಮಾರ್‍ರವರು ತಮ್ಮಗೆ ಟಿಕೆಟ್‍ಯಿಂದ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ಜನಾಭಿಪ್ರಾಯ ಚಂದನ್‍ಕುಮಾರ್‍ರವರ ಪೂರಕವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 30 ನೇ ವಾರ್ಡ್ ಸ್ಥಳೀಯ ಅಭ್ಯರ್ಥಿ ಎಂದು ಬಿಂಬಿತವಾಗಿದೆ ಎಂದು ಹಲವಾರು ಸಾರ್ವಜನಿಕರು, ಗ್ರಾಮಸ್ಥರು ತಿಳಿಸಿದ್ದಾರೆ. 30 ನೇ ವಾರ್ಡ್ ಸ್ಥಳೀಯ ಅಭ್ಯರ್ಥಿಯಾದ ಟಿ.ಎನ್. ಚಂದನ್ ಕುಮಾರ್ ನಾಮಪತ್ರ ಸಲ್ಲಿಸಿದರು. ಪ್ರಿಯಾಂಕ, ಹರಿಪ್ರಸಾದ್, ಕವಿತಾ, ಅಡಿಟರ್ ಶಿವಕುಮಾರ್, ಕಿರಣ್ ಮುಂತಾದವರು ಭಾಗವಹಿಸಿದ್ದರು.