ಕಾಲೇಜು ವಿದ್ಯಾರ್ಥಿನಿ ಬಳಿ ಬರೋಬ್ಬರಿ 30 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ

ಪಂಜಾಬ್:

ಪಂಜಾಬ್ ನ ಮಾದಕ ದ್ರವ್ಯ ನಿರೋಧಕ ವಿಭಾಗದ ಪೊಲೀಸರು ಓರ್ವ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಇಬ್ಬರು ಸಹಚರರಿಂದ 6 ಕೆಜಿಯಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 30 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಗುರುವಾರ ಈ ಮೂವರು ಎಸ್ ಯು ವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಮೃತ್ ಸರದ ವಲ್ಹಾ ಬೈಪಾಸ್ ಬಳಿ ಅಡ್ಡಗಟ್ಟಿದ ಪೊಲೀಸರು ತಪಾಸಣೆ ನಡೆಸಿದಾಗ ಅವರ ಬಳಿ 6 ಕೆಜಿ ಹೆರಾಯಿನ್ ಇರುವುದು ಪತ್ತೆಯಾಗಿದೆ.ಕಾಲೇಜು ವಿದ್ಯಾರ್ಥಿನಿಯನ್ನು ಲವ್ ಪ್ರೀತ್ ಕೌರ್ ಎಂದು ಗುರುತಿಸಲಾಗಿದ್ದು, ಈಕೆ ಪಂಜಾಬಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.

ಮೇ 3 ರಂದು ರಾಜ್ಯಕ್ಕೆ ಷಾ ಭೇಟಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ

ಅವರ ಸಹಪಾಠಿಗಳಾದ ದೀಪ್ ರಾಯ್ ಮತ್ತು ಮೇಹಕ್ ರಾಯ್ ಇಬ್ಬರೂ ಭಾರತ-ಪಾಕಿಸ್ತಾನ ಗಡಿಗೆ ಅತ್ಯಂತ ಸನಿಹದಲ್ಲಿರುವ ಮಹಾವ ಗ್ರಾಮದ ನಿವಾಸಿಗಳಾಗಿದ್ದಾರೆ.ಈ ಮೂವರನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap