ಬೆಂಗಳೂರು
ಕಾಂಗ್ರೆಸ್ ನಲ್ಲಿ ಶಾಸಕಾಂಗ ನಾಯಕನ ಆಯ್ಕೆ ಕಸರತ್ತು ಮುಗಿಯುತ್ತಿದ್ದಂತೆ ಸಂಪುಟ ರಚನೆಯ ಸಂಕಷ್ಟ ಎದುರಾಗಿದ್ದು, ಹಿರಿಯ ನಾಯಕರನ್ನು ಸಮಾಧಾನಪಡಿಸುವುದು ಸವಾಲಿನ ಕೆಲಸವಾಗಿದೆ. ಸಂಪುಟ ರಚನೆಯ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸಲು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಇಡೀ ದಿನ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಕುರಿತು ವ್ಯಾಪಕ ಸಮಾಲೋಚನೆಗಳು ನಡೆಯಲಿವೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಅವಕಾಶ ದೊರಕಿಸಿಕೊಡಲು ಬಿಗಿ ಪಟ್ಟು ಹಿಡಿದಿದ್ದಾರೆ. ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ತಮ್ಮ ಬೆಂಬಲಿಗರಿಗೆ ಅವಕಾಶ ದೊರಕಿಸಿಕೊಡಲು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದಾರೆ. ಹೀಗಾಗಿ ಸಂಪುಟ ಸೇರಲು ಭಾರೀ ಪೈಪೋಟಿ ಆರಂಭವಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನಲ್ಲಿ ಗುರುವಾರ ನಡೆದಿದ್ದು, ಬಹುತೇಕ ಶಾಸಕರು ನಗರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ಶಾಸಕರಿಗೆ ಮಾಹಿತಿ ನೀಡಿದರು ಸಹ ಯಾವುದೇ ಸಮಸ್ಯೆ ಎದುರಾಗುವ ಸಾಧ್ಯತೆಗಳಿಲ್ಲ.
ಜಾತಿ, ಪ್ರಾದೇಶಿಕತೆ ಎಲ್ಲವನ್ನೂ ಮುಂದಿಟ್ಟು ಈ ಇಬ್ಬರು ನಾಯಕರು ತಮ್ಮ ಆಪ್ತರಿಗೆ ಸಚಿವ ಪಟ್ಟಕ್ಕಾಗಿ ನಡೆಸಿರುವ ಪ್ರಯತ್ನಗಳು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಶಾಸಕಾಂಗ ಪಕ್ಷದ ನಾಯಕತ್ವದ ಕಗ್ಗಂಟನ್ನು ಪರಿಹರಿಸಲು 4 ದಿನ ಕಸರತ್ತು ನಡೆಸಿದ್ದ ವರಿಷ್ಠರಿಗೆ ಸಂಪುಟ ರಚನೆಯ ಸಂಕಷ್ಟಗಳು ಇದೀಗ ಎದುರಾಗಿವೆ. ನಾಯಕತ್ವದ ಕಗ್ಗಂಟನ್ನು ಪರಿಹರಿಸಿದ ಮಾದರಿಯಲ್ಲೇ ಸಂಪುಟ ರಚನೆಯ ಕಗ್ಗಂಟಿಗೂ ಪರಿಹಾರ ದೊರಕಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ವರಿಷ್ಠರು ತಮ್ಮದೇ ಆದ ಸೂತ್ರ ಸಿದ್ಧಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಜೊತೆ ಸುಮಾರು 30 ಮಂದಿ ಸಚಿವರ ಸಂಪುಟ ಅಸ್ಥಿತ್ವಕ್ಕೆ ಬರುವ ಸಾಧ್ಯತೆಯಿದೆ. ಒಂದು ವೇಳೆ ಸಚಿವರ ಆಯ್ಕೆ ಕಗ್ಗಂಟಾದರೆ 14 ಸಚಿವರಷ್ಟೇ ಪ್ರಮಾಣವಚನ ಸ್ವೀಕರಿಸಲಿದ್ದು, ಉಳಿದವರಿಗೆ 2ನೇ ಹಂತದ ಸಂಪುಟ ವಿಸ್ತgರಣೆಯಲ್ಲಿ ಅವಕಾಶ ಸಿಗಬಹುದು. ಎಷ್ಟು ಜನರನ್ನು ಸಚಿವರನ್ನಾಗಿಸಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಜಾತಿ-ಪ್ರಾದೇಶಿಕತೆ ಸಂಪುಟ ರಚನೆಯ ಮಾನದಂಡವಾಗುವುದರಿAದ ಕೆಲ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈತಪುö್ಪವ ಸಾಧ್ಯತೆಗಳಿವೆ.
ಹಲವು ಮಂದಿ ಈಗಾಗಲೇ ದೆಹಲಿಗೆ ತೆರಳಿದ್ದು, ಮಲ್ಲಿಕಾರ್ಜುನ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಶಾಸಕರಾದ ಎಸ್.ಎಸ್ ಮಲ್ಲಿಕಾರ್ಜುನ್, ಕೆ.ಎನ್. ರಾಜಣ್ಣ, ವಿನಯ್‌ಕುಲಕರ್ಣಿ, ಅಜಯ್‌ಸಿಂಗ್, ಶಿವರಾಜ್ ತಂಗಡಗಿ, ಯು.ಟಿ. ಖಾದರ್ ಹಲವಾರು ಮಂದಿ ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ಸಂಭಾವ್ಯ ಸಚಿವರ ಪಟ್ಟಿ,
ಎಂ.ಬಿ. ಪಾಟೀಲ್,ಶಿವಾನಂದ ಪಾಟೀಲ್,ಡಾ. ಜಿ. ಪರಮೇಶ್ವರ್,ಕೆ.ಹೆಚ್. ಮುನಿಯಪ್ಪ,ಬಿ.ಕೆ. ಹರಿಪ್ರಸಾದ್,ರಾಮಲಿಂಗಾರೆಡ್ಡಿ,ಕೆ.ಜೆ ಜಾರ್ಜ್,ಶಾಮನೂರು ಶಿವಶಂಕರಪ್ಪ/ಎಸ್.ಎಸ್ ಮಲ್ಲಿಕಾರ್ಜುನ,ಆರ್.ವಿ ದೇಶ್‌ಪಾಂಡೆ,ಕೃಷ್ಣಬೈರೇಗೌಡ,ಹೆಚ್.ಕೆ ಪಾಟೀಲ್,ಯು.ಟಿ. ಖಾದರ್, ಜಮೀರ್‌ಅಹ್ಮದ್‌ಖಾನ್,ಎನ್.ಎ. ಹ್ಯಾರೀಸ್/ಸಲೀಂ ಅಹ್ಮದ್,ಸತೀಶ್ ಜಾರಕಿಹೊಳಿ,ಡಾ. ಹೆಚ್.ಸಿ ಮಹದೇವಪ್ಪ,ಶರಣಪ್ರಕಾಶ್ ಪಾಟೀಲ್,ಈಶ್ವರ ಖಂಡ್ರೆ,ಅಜಯ್‌ಸಿಂಗ್,ದಿನೇಶ್‌ಗುಂಡೂರಾವ್, ಮಧುಬಂಗಾರಪ್ಪ ,ಪ್ರಿಯಾಂಕ್‌ಖರ್ಗೆ,ಬಸವರಾಜರಾಯರೆಡ್ಡಿ, ವಿನಯ್‌ಕುಲಕರ್ಣಿ ,ಬಿ.ಕೆ. ಸಂಗಮೇಶ್,ಆರ್.ಬಿ. ತಿಮ್ಮಾಪುರ,ಎಂ. ಕೃಷ್ಣಪ್ಪ/ಪ್ರಿಯಾಕೃಷ್ಣ ,ಸಂತೋಷ್‌ಲಾಡ್ ,ಲಕ್ಷಿಹೆಬ್ಬಾಳ್ಕರ್,ಕೊತ್ತೂರು ಮಂಜುನಾಥ,ಕೆ.ಎನ್ ರಾಜಣ್ಣ,ಭೈರತಿ ಸುರೇಶ್,ರಾಘವೇಂದ್ರ ಯತ್ನಾಳ್ ,ಚೆಲುವರಾಯ ಸ್ವಾಮಿ,ತನ್ವೀರ್‌ಸೇಠ್,ಹಂಪನಗೌಡ ಬಾದರ್ಲಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ