ಟರ್ಕಿ ಭೂಕಂಪನ : 300 ಕ್ಕೂ ಹೆಚ್ಚು ಮಂದಿ ದಾರುಣ ಸಾವು

ನವದೆಹಲಿ

     ಫೆ.6ರ ಮುಂಜಾನೆ ದಕ್ಷಿಣ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯ ಸುಮಾರು 7.8 ಎಂದು ಯುಎಸ್‌ಜಿಎಸ್ ತಿಳಿಸಿದೆ . ನಂತರದಲ್ಲಿ 6.7 ತೀವ್ರತೆಯ ಮತ್ತೊಂದು ಪ್ರಬಲ ಕಂಪನ ಸಂಭವಿಸಿದ್ದು ಈ ದುರ್ಘಟನೆಯಲ್ಲಿ ಸರಿಸುಮಾರು 300 ಮಂದಿ ಸಾವನ್ನಪ್ಪಿರಬಹುದು ಎಂದು ತಿಳಿದು ಬಂದಿದೆ.

ಇದನ್ನು ಸಹ ಓದಿ:ಸರಣಿ ಭೂಕಂಪನಕ್ಕೆ ನಡುಗಿದ ಟರ್ಕಿ …!

     ಹಾನಿಯ ಪ್ರಮಾಣ ಮತ್ತು ಸಾವಿನ ಸಂಖ್ಯೆ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಮತ್ತು ವಿಡಿಯೊಗಳು ಅನೇಕ ಸಾವುನೋವುಗಳನ್ನು ಸೂಚಿಸುತ್ತವೆ. ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಕುಸಿದಿವೆ ಮತ್ತು ಅನೇಕ ಜನರು ಅವಶೇಷಗಳಲ್ಲಿ ಸಿಲುಕಿರುವ ಭಯವಿದೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link