ಚಂದ್ರಗಿರಿ ಬಳಿ ಟ್ರಕ್‌ ಕಾರ್‌ ಅಪಘಾತ : 3 ಸಾವು

ತಿರುಪತಿ :

    ಆಂಧ್ರ ಪ್ರದೇಶದ ಚಿತ್ತೂರು ತಾಲೂಕಿನ ಚಂದ್ರಗಿರಿ ಬಳಿ ಟೊಮ್ಯಾಟೋ ತುಂಬಿದ ಟ್ರಕ್ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತಿದ್ದ ಕರ್ನಾಟಕ ಮೂಲ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ .ಘಟನೆ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

   ಟೊಮೆಟೊ ತುಂಬಿಸಿಕೊಂಡಿದ್ದ ಟ್ರಕ್ ಕಲಕಡದಿಂದ ಚೆನ್ನೈಗೆ ಹೋಗುತ್ತಿತ್ತು. ಟ್ರಕ್ ಮಗುಚಿಬಿದ್ದ ಪರಿಣಾಮ ಕಾರು ತುಂಡು ತುಂಡಾಗಿ ಅಪ್ಪಚ್ಚಿಯಾಗಿದೆ. ಮೃತರು ಕರ್ನಾಟಕದ ಚಿಕ್ಕಬಳದ್ಳಾಪುರದವರಾಗಿದ್ದು ರಮೇಶ್ ಮೂರ್ತಿ (34), ಮಂಜುನಾಥ (38) ಮತ್ತು ಮುನಿ ವೆಂಕಟ ರೆಡ್ಡಿ (55) ಎಂದು ಗುರುತ್ತಿಸಲಾಗಿದೆ. ತಿರುಪತಿಗೆ ಹೋಗಿ, ಗುರುವಾರ ಸಂಜೆ ಚಿಕ್ಕಬಳ್ಳಾಪುರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

  ಅಪಘಾತದ ಬಗ್ಗೆ ಪೊಲೀಸರು ತಕ್ಷಣ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ರಕ್ಷಣಾ ಪರಿಹಾರ ಕಾರ್ಯ ನಡೆಸಿಕೊಟ್ಟರು. ಅಪಘಾತದ ಬಗ್ಗೆ ಪೊಲೀಸ್ ಅಧೀಕ್ಷಕ ಎಲ್. ಸುಬ್ಬರಾಯುಡು ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದರು. ಅವರು ಅಪಘಾತದ ಬಗ್ಗೆ ಮಾತನಾಡಿ, ಅಪಘಾತ ಪ್ರವೃತ್ತಿಯ ಈ ರಸ್ತೆಯಲ್ಲಿ ಸಮಸ್ಯೆ ನಿವಾರಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಹಕಾರದೊಂದಿಗೆ ಇಲಾಖೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Recent Articles

spot_img

Related Stories

Share via
Copy link