ಒಂದೇ ದಿನಕ್ಕೆ ನಾಲ್ಕುವರೆ ಟಿಎಂಸಿ ನೀರು ಸಂಗ್ರಹ

ಆಲಮಟ್ಟಿ.

ವಿಶೇಷ ವರದಿ : ಮಹಬೂಬ ವಾಲಿಕಾರ. ನಿಡಗುಂದಿ.

     ಆಲಮಟ್ಟಿ ಜಲಾಶಯಕ್ಕೆ ದಿನದಿಂದ ದಿನಕ್ಕೆ ಒಳಹರಿವು ಹೆಚ್ಚುತ್ತಾ ಸಾಗಿದ್ದು ಜಲಾಶಯದಲ್ಲಿ ಒಂದೇ ದಿನಕ್ಕೆ ನಾಲ್ಕುವರೆ ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ.

     ಮಹಾರಾಷ್ಟçದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ. ಹೀಗಾಗಿ ನಿತ್ಯ ಜಲಾಶಯದ ಮಟ್ಟ ಹೆಚ್ಚಳವಾಗುತ್ತಾ ಸಾಗಿದೆ.ಭಾನುವಾರದಿಂದ ಸೋಮವಾರದವರೆಗೆ ಒಂದೇ ದಿನದಲ್ಲಿ ೪.೫೦೧ ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ ಜಲಾಶಯದ ಮಟ್ಟವು ೫೧೦.೩೮ ಮೀಟರ್‌ಗೆ ತಲುಪಿದ್ದು, ಜಲಾಶಯದಲ್ಲಿ ೩೧.೭೮೫ ಟಿಎಂಸಿ ನೀರು ಇದೆ. ಒಳಹರಿವು ೫೨,೬೫೦ ಕ್ಯುಸೆಕ್ ಇತ್ತು. ಜಲಾಶಯದ ಹಿನ್ನೀರು ಬಳಕೆ ೫೫೫ ಕ್ಯುಸೆಕ್ ಇತ್ತು.

Recent Articles

spot_img

Related Stories

Share via
Copy link