ಹುಬ್ಬಳ್ಳಿ: ಮಾರಕಾಸ್ತ್ರ ಹೊಂದಿದ್ದ ನಾಲ್ವರನ್ನು ಬಂಧನ

ಹುಬ್ಬಳ್ಳಿ:

   ಮಾರಕಾಸ್ತ್ರ ಹೊಂದಿದ್ದ ನಾಲ್ವರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಕಸಬಾಪೇಟ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಟಗರ ಓಣಿಯ ಮಹಮ್ಮದಸಾಧಿಕ ಬಾಬಾಸಾಧಿಕ್ ಬೇಪಾರಿ (28), ದಾದಾಪೀರ್ ಚೌಧರಿ (28), ಕೋಳೆಕರ ಪ್ಲಾಟ್‌ನ ಆಸೀಫ್ ಹಜರತಬಿಲಾಲ್ ಬೇಪಾರಿ (26), ಬುಲ್ಲೋಜರ ನಗರದ ಮೋಹಿನಖಾನ್ ಧಾರವಾಡ (24) ಬಂಧಿತರು.

   ಹಳೇಹುಬ್ಬಳ್ಳಿಯ ಗೌಸಿಯಾಟೌನ್ ಗಾರ್ಡನ್ ಹತ್ತಿರ ಅಪರಾಧ ಮಾಡುವ ಉದ್ದೇಶದಿಂದ ತಲವಾರ ಹಿಡಿದು ನಿಂತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪಿಐ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ ಬಂಧಿಸಿದೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಹಾಜರುಪಡಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap