ಸಾತ್ವಿಕ್‌ ಪ್ರಕರಣ : ಜೀವ ಉಳಿಸಿದ 4 ವೈದ್ಯಕೀಯ ಅಂಶಗಳು ಯಾವುವು ಗೊತ್ತಾ…?

ವಿಜಯಪುರ:

     ಕೊಳವೆ ಬಾವಿಗೆ ಬಿದ್ದು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದ 15 ತಿಂಗಳ ಮಗು ಸಾತ್ವಿಕ್ ಮುಜಗೊಂಡ ಜೀವ ಉಳಿಸಿದ್ದು 4 ವೈದ್ಯಕೀಯ ಅಂಶಗಳು ಎಂದು ವೈದ್ಯರು ಹೇಳಿದ್ದಾರೆ.

    ಬೋರ್ವೆಲ್ ಗೆ ಬಿದ್ದಿದ್ದ 15 ತಿಂಗಳ ಮಗು ಸಾತ್ವಿಕ್ ಮುಜಗೊಂಡ್ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದರೂ, ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಗು ಬದುಕಲು ಬೇಕಾದ ಎಲ್ಲ ಅಂಶಗಳನ್ನು ಪೂರೈಸಿದ ರೀತಿ ಅಚ್ಚರಿ ಮೂಡಿಸಿದೆ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ.

    2 ದಿನಗಳ ಹಿಂದಷ್ಟೇ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ 15 ತಿಂಗಳ ಮಗು ಸಾತ್ವಿಕ್ ಆಟವಾಡುತ್ತಾ ಹೋಗಿ ತಲೆ ಕೆಳಗಾಗಿ ಬಿದ್ದಿತ್ತು. ಬಳಿಕ ಸತತ 21 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ರಕ್ಷಿಸಲಾಯಿತು. ಅದಾಗ್ಯೂ ಈ 21 ಗಂಟೆಗಳ ಕಾಲ ಈ ಪುಟ್ಟ ಮಗು ಬದುಕುಳಿದ ಪರಿಸ್ಥಿತಿಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಹೆಸರಾಂತ ಮಕ್ಕಳ ವೈದ್ಯರಾದ ಡಾ ಮಲ್ಲನಗೌಡ ಪಾಟೀಲ್ ಮತ್ತು ಡಾ ಮುಜಾಹಿದ್ ಬಗ್ವಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ವೈದ್ಯಕೀಯ ಲೋಕದ ಪ್ರಕಾರ ಈ ಪ್ರಕರಣದಲ್ಲಿ ಮಗುವನ್ನು ಉಳಿಸಲು ನಾಲ್ಕು ನಿರ್ಣಾಯಕ ಅಂಶಗಳು ನೆರವಾಗಿವೆ. ಅವುಗಳೆಂದರೆ.

    ಸಾಕಷ್ಟು ಮತ್ತು ಸಮಯೋಚಿತ ಆಮ್ಲಜನಕ ಪೂರೈಕೆ,ಬಿದ್ದ ನಂತರ ಬಾಲಕನ ಸ್ಥಾನ,ಬಾಲಕನ ತಲೆ ಅಥವಾ ಪಕ್ಕೆಲುಬಿನ ಮೇಲೆ ಯಾವುದೇ ಆಂತರಿಕ ಗಾಯಗಳಾಗದೇ ಇರುವುದು,ರಕ್ಷಣಾ ಕಾರ್ಯಾಚರಣೆಯನ್ನು 30 ಗಂಟೆಗಳ ಒಳಗೆ ಪೂರ್ಣಗೊಳಿಸಿರುವುದು,ಈ ಮೇಲ್ಕಂಡ 4 ಅಂಶಗಳು ಮಗು ಬದುಕಿ ಬರಲು ಕಾರಣವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

    ಬಾಲಕ ಕೊಳವೆಬಾವಿಯಲ್ಲಿ ಬಿದ್ದ ನಂತರ ಸಂಜೆ 6:30 ರ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಮತ್ತು ಅಧಿಕಾರಿಗಳು ಸಂಜೆ 7:00 ರ ಹೊತ್ತಿಗೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು. ಮೊದಲಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಕೊಳವೆಬಾವಿಯಲ್ಲಿ ಮತ್ತಷ್ಟು ಜಾರಿ ಬೀಳುವುದನ್ನು ತಡೆಯಲು ಅವರು ಮಗುವಿನ ಪಾದಗಳನ್ನು ಲಾಕ್ ಮಾಡಲು ಕೊಕ್ಕೆ ಮಾದರಿ ವಸ್ತುವನ್ನು ಪೈಪ್ ನೊಳೆಗೆ ಇಳಿ ಬಿಟ್ಟರು. ಬಳಿಕ ಸಂಜೆ 7:30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಮಣ್ಣು ತೆಗೆಯುವ ಯಂತ್ರಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು.

    ಇನ್ನು ಈ ಪ್ರಕರಣದ ಕುರಿತು ಮಾತನಾಡಿರುವ ಡಾ ಪಾಟೀಲ್ ಅವರು, “ಅದ್ಭುತವಾಗಿ, ಮಗುವಿಗೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಎಲ್ಲಾ ನಾಲ್ಕು ಅಂಶಗಳನ್ನು ಪೂರೈಸಿದ್ದಾರೆ. ಸಾಮಾನ್ಯವಾಗಿ ಮನುಷ್ಯರು ಕಡಿಮೆ ಆಮ್ಲಜನಕ ಪೂರೈಕೆಯನ್ನು ಹೊಂದಿರುವ ಆಳವಾದ ಕೊಳವೆಬಾವಿಗಳಿಗೆ ಬಿದ್ದಾಗ, ಅವರು ಉಸಿರುಕಟ್ಟುವಿಕೆಯಿಂದ ಸಾಯುತ್ತಾರೆ. ವೈದ್ಯಕೀಯ ವಿಚಾರದಲ್ಲಿ ಸಾಮಾನ್ಯವಾಗಿ, ವ್ಯಕ್ತಿಯು ಸುಮಾರು ಶೇ.21%ರಷ್ಟು ಆಮ್ಲಜನಕವನ್ನು ಪಡೆದರೆ ಹೆಚ್ಚು ಕಾಲ ಬದುಕಬಹುದು. ಸಾತ್ವಿಕ್‌ನ ವಿಷಯದಲ್ಲಿ, ಅವನು ಆಮ್ಲಜನಕವಿಲ್ಲದ ಸ್ಥಳದಲ್ಲಿ ಹೆಚ್ಚು ಆಳಕ್ಕೆ ಬಿದ್ದಿರಲಿಲ್ಲ. ಅಲ್ಲದೆ, ಬಾಹ್ಯ ಆಮ್ಲಜನಕ ಪೂರೈಕೆಯನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು, ಇದು ಹುಡುಗನಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು” ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap