ಹಿಂದಿಯಲ್ಲಿ 400 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಯಶ್​ ಚಿತ್ರ ಗಳಿಸಿದ್ದು 1100 ಪ್ಲಸ್​ ಕೋಟಿ

KGF 2:

 ವಿಶ್ವ ಮಾರುಕಟ್ಟೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ 24 ದಿನಗಳಲ್ಲಿ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರಪೂರ ಲಾಭ ಆಗಿದೆ.ಕನ್ನಡದ ಸಿನಿಮಾ ಈ ಮಟ್ಟಕ್ಕೆ ಸಾಧನೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಪರಭಾಷೆಯ ಘಟಾನುಘಟಿಗಳು ಮಾಡಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕುವ ಮಟ್ಟಕ್ಕೆ ‘ಕೆಜಿಎಫ್​: ಚಾಪ್ಟರ್​ 2’  ಸಿನಿಮಾ ಗೆದ್ದು ಬೀಗಿದೆ.

ಬಿಜೆಪಿ ಮುಖ್ಯಮಂತ್ರಿ ಸ್ಥಾನ ‘ಪೇಮೆಂಟ್ ಸೀಟಾ’? : ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ  ಹೇಳಿಕೆ

ಈ ಸಿನಿಮಾ ತೆರೆಕಂಡು 23 ದಿನ ಕಳೆದಿದೆ. ವಿಶ್ವಾದ್ಯಂತ ಅಬ್ಬರಿಸಿರುವ ರಾಕಿ ಭಾಯ್​ ಭರ್ಜರಿ ಕಲೆಕ್ಷನ್​ ಮಾಡಿದ್ದಾನೆ. ಹಿಂದಿ ಪ್ರೇಕ್ಷಕರು ಈ ಸಿನಿಮಾಗೆ ಭರಪೂರ ಮೆಚ್ಚುಗೆ ನೀಡಿದ್ದಾರೆ. ಅದರ ಪರಿಣಾಮವಾಗಿ ಬಾಲಿವುಡ್​ ಮಾರ್ಕೆಟ್​ನಲ್ಲಿ ‘ಕೆಜಿಎಫ್​ 2’  ಅಭೂತಪೂರ್ವ ಗೆಲುವು ಕಂಡಿದೆ. ಹಿಂದಿ ವರ್ಷನ್​ನಿಂದ ಯಶ್​  ಸಿನಿಮಾಗೆ ಆಗಿರುವುದು ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್​! ಮೂಲ ಹಿಂದಿ ಸಿನಿಮಾಗಳೇ 100 ಕೋಟಿ ರೂ. ಕ್ಲಬ್​ ಸೇರುವುದು ಕಷ್ಟ ಆಗಿರುವ ಈ ಕಾಲದಲ್ಲಿ KGF 2  ಚಿತ್ರ ಹಿಂದಿಗೆ ಡಬ್​ ಆಗಿ ಈ ಸಾಧನೆ ಮಾಡಿರುವುದು ನಿಜಕ್ಕೂ ಗ್ರೇಟ್​. ಈ ಚಿತ್ರದ ಯಶಸ್ಸು ಕಂಡು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಜಾಗತಿಕ ಸಿನಿಮಾರಂಗದ ಮಂದಿಯೆಲ್ಲ ಬೆಕ್ಕಸ ಬೆರಗಾಗಿದ್ದಾರೆ.

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್ ಶಾಕ್ : 100 ರೂ. ಗಡಿ ದಾಟಿದ ಕೆಜಿ ಟೊಮೆಟೊ ಬೆಲೆ!

‘ಕೆಜಿಎಫ್​: ಚಾಪ್ಟರ್​ 1’ ತೆರೆಕಂಡಾಗ ಅದು ಹಿಂದಿಯಲ್ಲಿ ಮಾಡಿದ್ದ ಲೈಫ್​ಟೈಮ್​ ಕಲೆಕ್ಷನ್​ 44.09 ಕೋಟಿ ರೂ. ಮಾತ್ರ. ಆದರೆ ಈಗ ಆ ಚಿತ್ರದ ಸೀಕ್ವೆಲ್​ನಿಂದ ಬಾಕ್ಸ್​ ಆಫೀಸ್​ನಲ್ಲಿ ಸುನಾಮಿಯೇ ಸೃಷ್ಟಿ ಆಗಿದೆ. ಮೊದಲ ದಿನ ‘ಕೆಜಿಎಫ್​ 2’ ಸಿನಿಮಾ ಹಿಂದಿಯಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಈಗ ಒಟ್ಟು 23 ದಿನಕ್ಕೆ ಹಿಂದಿ ವರ್ಷನ್​ನಿಂದ 400 ಕೋಟಿ ರೂಪಾಯಿ ಕಮಾಯಿ ಆಗಿದೆ. ಈ ಸಾಧನೆಯಿಂದ ಯಶ್​ ಅವರು ಮತ್ತೊಂದು ಎತ್ತರಕ್ಕೆ ಏರಿದ್ದಾರೆ.

LPG ಸಿಲಿಂಡರ್​ ದರದಲ್ಲಿ ಮತ್ತೆ 50 ರೂ. ಹೆಚ್ಚಳ! ಇಂದಿನಿಂದಲೇ ಜಾರಿ, ಗ್ರಾಹಕರಿಗೆ ಬೆಲೆ ಏರಿಕೆ ಬರೆ

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಎದುರು ಬಿಡುಗಡೆ ಆಗಲು ಬಾಲಿವುಡ್​ನ ಸ್ಟಾರ್​ ನಟರ ಚಿತ್ರಗಳು ಕೂಡ ಹೆದರಿಕೊಂಡವು. ಆದರೂ ಹುಂಬತನ ಮಾಡಿ ರಿಲೀಸ್​ ಆಗಿದ್ದ ತಮಿಳಿನ ‘ಬೀಸ್ಟ್​’ ಚಿತ್ರ ನೆಲ ಕಚ್ಚಿತು. ನಂತರದ ವಾರಗಳಲ್ಲಿ ಬಿಡುಗಡೆಯಾದ ಹಿಂದಿಯ ‘ಜೆರ್ಸಿ’, ‘ಹೀರೋಪಂತಿ 2’, ‘ರವ್​ವೇ 34’ ಮುಂತಾದ ಸಿನಿಮಾಗಳು ಕೂಡ ‘ಕೆಜಿಎಫ್​ 2’ ಎದುರು ನಿಲ್ಲಲು ಸಾಧ್ಯವಾಗದೇ ಸೋಲೊಪ್ಪಿಕೊಂಡವು. ಹೀಗೆ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ತನ್ನ ಅಧಿಪತ್ಯ ಮೆರೆದಿದೆ.

ಲಂಚ: ವಾಣಿಜ್ಯ ತೆರಿಗೆ ಇಲಾಖೆ ಎಸಿ ಬಂಧನ

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾಗೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರಪೂರ ಲಾಭ ಆಗಿದೆ. ವಿಶ್ವಾದ್ಯಂತ ಈ ಸಿನಿಮಾ 24 ದಿನಗಳಲ್ಲಿ 1100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಸಿನಿಮಾ ಮಾಡಿದ ದಾಖಲೆಯನ್ನು ಮುರಿಯಲು ಇನ್ಯಾರಿಗೆ ಸಾಧ್ಯ ಎಂದು ದೊಡ್ಡ ದೊಡ್ಡ ಸ್ಟಾರ್​ ಹೀರೋಗಳೆಲ್ಲ ಅತ್ತಿತ್ತ ನೋಡುವಂತಾಗಿದೆ. ಸಂಜಯ್​ ದತ್​, ರವೀನಾ ಟಂಡನ್​ ಅವರು ‘ಕೆಜಿಎಫ್​ 2’ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು. ಹಿಂದಿ ಪ್ರೇಕ್ಷಕರಿಗೆ ಈ ಚಿತ್ರ ಆಪ್ತವಾಗಲು ಇದು ಕೂಡ ಒಂದು ಕಾರಣ.

 

ರವಿ ಬಸ್ರೂರು ಅವರ ಸಂಗೀತ, ಭುವನ್​ ಗೌಡ ಛಾಯಾಗ್ರಹಣ, ಶಿವಕುಮಾರ್​ ಅವರ ಕಲಾ ನಿರ್ದೇಶನ, ಯಶ್​ ಮ್ಯಾನರಿಸಂ, ಎಲ್ಲ ಕಲಾವಿದರ ನಟನೆ, ತಾಯಿ ಸೆಂಟಿಮೆಂಟ್​, ಮೈ ನವಿರೇಳಿಸುವ ಆಯಕ್ಷನ್​ ಸನ್ನಿವೇಶ, ಸರಿಸಾಟಿ ಇಲ್ಲದ ಮೇಕಿಂಗ್​, ಬೃಹತ್​ ಸೆಟ್​ಗಳು ಸೇರಿದಂತೆ ಅನೇಕ ಅಂಶಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಜಯಭೇರಿ ಬಾರಿಸಿದೆ.

 ಹುಬ್ಬಳ್ಳಿ ಸರ್ಕಿಟ್ ಹೌಸ್ ನಲ್ಲಿ  ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ..!

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap