ತ್ರಿಪುರ : ರಣಕಣದಲ್ಲಿ 45 ಮಂದಿ ಕುಬೇರರು..!

41 ಮಂದಿ ಕ್ರಿಮಿನಲ್ ‌ ಹಿನ್ನೆಲೆ ಹೊಂದಿದ್ದಾರೆ

ಅಗರ್ತಲಾ: 

      ಫೆ 16 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 259 ಅಭ್ಯರ್ಥಿಗಳ ಪೈಕಿ ಸುಮಾರು 45 ಮಂದಿ ಕೋಟ್ಯಧಿಪತಿಗಳಿದ್ದಾರೆ ಇನ್ನು 41 ಮಂದಿ ಮೇಲೆ ಕ್ರಿಮಿನಲ್ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ನಲ್ಲಿಯೇ  6 ಮಂದಿ ಕೋಟ್ಯಧಿಪತಿಗಳು, ತೃಣಮೂಲ ಕಾಂಗ್ರೆಸ್ 4 ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸಹ ಕೋಟ್ಯಧಿಪತಿಗಳು ಎನ್ನಲಾಗಿದೆ.

      ಚಾರಿಲಂ ಕ್ಷೇತ್ರದಿಂದ ಸ್ಪರ್ಧಿಸಿರುವ ಉಪಮುಖ್ಯಮಂತ್ರಿ ಬಿಜೆಪಿಯ ಜಿಷ್ಣು ದೇವ್ ವರ್ಮಾ ₹15.58 ಕೋಟಿ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವ ಶ್ರೀಮಂತ ಅಭ್ಯರ್ಥಿ ಎಂದು ವರದಿ ತಿಳಿಸಿದೆ. ಟೌನ್ ಬರ್ಡೋವಾಲಿ ಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಮುಖ್ಯಮಂತ್ರಿ ಮಾಣಿಕ್ ಸಹಾ ವೈದ್ಯ, ₹13.90 ಕೋಟಿ ಆಸ್ತಿಯೊಂದಿಗೆ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ ಎಂದು ಎಡಿಆರ್ ರಾಜ್ಯ ಸಂಯೋಜಕ ಬಿಸ್ವೆಂದು ಭಟ್ಟಾಚಾರ್ಜಿ ತಿಳಿಸಿದರು.

     ₹12.57 ಕೋಟಿ ಆಸ್ತಿ ಹೊಂದಿರುವ ತಿಪ್ರಾ ಮೋಥಾದ ಅಭಿಜಿತ್ ಸರ್ಕಾರ್ ಅವರು ಮೂರನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.  55 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿಯು ₹1.86 ಕೋಟಿಯೊಂದಿಗೆ ಗರಿಷ್ಠ ಸರಾಸರಿ ಆಸ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.

‘      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap