ಅಮೆರಿಕಾದಲ್ಲಿ ಬೃಹತ್ ಹನುಮಂತನ ಪ್ರತಿಮೆ ಪ್ರತಿಷ್ಟಾಪನೆ!!

ಡೆಲವೇರ್ :

     ಅಮೆರಿಕಾದಲ್ಲಿ 25 ಅಡಿ ಎತ್ತರದ ಆಂಜನೇಯ ಪ್ರತಿಮೆ  ಸ್ಥಾಪನೆಯಾಗುವ ಮೂಲಕ ಸುದ್ದಿಯಲ್ಲಿದೆ.  

    ಡೆಲಿವೇರ್ ನಲ್ಲಿ ಪ್ರತಿಷ್ಠಾಪಿಸಲಾಗಿರುವ ಹನುಮಂತನ ಪ್ರತಿಮೆಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ. ಸುಮಾರು 12 ಕರಕುಶಲ ಕರ್ಮಿಗಳು ಒಂದು ವರ್ಷಗಳ ಸತತ ಪ್ರಯತ್ನದಿಂದಾಗಿ ಈ ಪ್ರತಿಮೆಯನ್ನು ರೆಡಿ ಮಾಡಿದ್ದಾರೆ.

     ಹನುಮಂತನ ವಿಗ್ರಹ 25 ಅಡಿ ಎತ್ತರವಿದ್ದು ಕಪ್ಪು ಗ್ರಾನೈಟ್‌ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ಪೂರ್ಣಗೊಳಿಸಲು ಒಂದು ವರ್ಷ ಕಾಲ ಹಿಡಿದಿದೆ ಎಂದು ತಿಳಿದುಬಂದಿದೆ. ಇದರ ತೂಕ ಸುಮಾರು 45 ಟನ್. ಇದನ್ನು ತೆಲಂಗಾಣದ ವಾರಂಗಲ್ ನಿಂದ ಡೆಲವೇರ್ ಗೆ ತರಲಾಗಿದೆ” ಎಂದು ಈ ಪ್ರಾಂತ್ಯದ ಹಿಂದೂ ದೇವಾಲಯ ಅಸೋಸಿಯೇಶನ್ ‌ನ ಅಧ್ಯಕ್ಷ ಪತಿಬಂದ ಶರ್ಮಾ ಹೇಳಿದ್ದಾರೆ.

      ಇದು ಅಮೆರಿಕಾದಲ್ಲಿರುವ ಅತಿ ಎತ್ತರದ ಹಿಂದೂ ದೇವರ ವಿಗ್ರಹವಾಗಿದ್ದು, ಅವರ್ ಲೇಡಿ ಕ್ವೀನ್ ಆಫ್ ಪೀಸ್ ಪ್ರತಿಮೆಯ ನಂತರ ಈ ಪ್ರದೇಶದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ ಈ ಹನುಮಾನ್ ಪ್ರತಿಮೆ.

     ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ಅಮೆರಿಕಾದಲ್ಲಿ ಸ್ಥಾಪನೆಯಾಗಿರುವ ಅತಿ ಎತ್ತರದ ಆಂಜನೇಯ ಪ್ರತಿಮೆಯೇ ಇದಕ್ಕೆ ಜೀವಂತ ಉದಾಹರಣೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap