ಫ್ರಾನ್ಸ್:
ಗಲಭೆಗಳು ಫ್ರಾನ್ಸ್ನ ಉತ್ತರ ಭಾಗವನ್ನೂ ತಲುಪಿದ್ದು 45 ಸಾವಿರ ಪೊಲೀಸರನ್ನು ಗಲಭೆ ತಡೆಯಲು ನಿಯೋಜಿಸಲಾಗಿದೆ. ಈವರೆಗೆ ಒಟ್ಟು 1,100 ಜನರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು ಅಷ್ಟೂ ಜನರ ಸರಾಸರಿ ವಯಸ್ಸು ಕೇವಲ 17 ವರ್ಷ ಎಂದು ವರದಿಯಾಗಿದೆ.
ಯುವ ಗಲಭೆಕೋರರು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡಿದ್ದು, ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ. ಈ ಸಂದರ್ಭ ಅವರು ಆಯಪಲ್ನಂತಹ ದುಬಾರಿ ಅಂಗಡಿಗಳಿಂದ ಹಿಡಿದು, ಚಿಲ್ಲರೆ ಅಂಗಡಿಗನ್ನೂ ಲೂಟಿ ಮಾಡಿದ್ದಾರೆ. ಹಿಂಸಾಚಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಫ್ರಾನ್ಸ್ ಸಾಕ್ಷಿಯಾಗಿದೆ.
ಈ ವಾರದ ಆರಂಭದಲ್ಲಿ ಉತ್ತರ ಆಫ್ರಿಕನ್ ಮೂಲದ ಹದಿಹರೆಯದ ಬಾಲಕನನ್ನು ಪೊಲೀಸರು ಗುಂಡಿಕ್ಕಿದ್ದು ಅಶಾಂತಿಯ ವಾತಾವರಣ ತಿಳಿಯಾಗುವ ಯಾವುದೇ ಲಕ್ಷಣಗಳನ್ನು ಕಾಣಿಸುತ್ತಿಲ್ಲ.
ಪ್ಯಾರಿಸ್‌ನ ಪಶ್ಚಿಮ ಹೊರವಲಯದಲ್ಲಿರುವ ಕಾರ್ಮಿಕ ವರ್ಗದ ಪಟ್ಟಣವಾದ ನಾಂಟೆಯಲ್ಲಿ ಮೊದಲು ಗಲಭೆಗಳು ಭುಗಿಲೆದ್ದವು. ಅಲ್ಲಿ 17 ವರ್ಷದ ಬಾಲಕ ನಹೆಲ್ ಎಂ ಮಂಗಳವಾರ ಟ್ರಾಫಿಕ್ ಸ್ಟಾಪ್‌ನಲ್ಲಿ ಪೊಲೀಸ್ ಅಧಿಕಾರಿಯಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದ. ಅಧಿಕಾರಿಯ ಮೇಲೆ ಕೊಲೆಯ ಪ್ರಾಥಮಿಕ ಆರೋಪವನ್ನು ಹೊರಿಸಲಾಗಿದೆ.
ಬಾಲಕನನ್ನು ಪೋಲಿಸರು ನಿಲ್ಲಿಸಿದ್ದು ನಂತರ ಗುಂಡು ಹೊಡೆದಿದ್ದಾರೆ. ಆಗ ನಹೆಲ್ನ ಎಡಗೈ ಮತ್ತು ಎದೆಯ ಮೂಲಕ ಗುಂಡು ತೆರಳಿದ್ದು ಬಾಲಕ ಸಾವನ್ನಪ್ಪಿದ್ದ. ಬಾಲಕನಿಗೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ, ತನಗೆ ಅಥವಾ ಇತರರಿಗೆ ಗಾಯವಾಗಬಹುದೆಂಬ ಭಯದಿಂದ ಹಾಗೆ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ ಎಂದು ನಾಂಟೆಗ್ರೆ ಪಬ್ಲಿಕ್ ಪ್ರಾಸಿಕ್ಯೂಟರ್ ಪಾಸ್ಕಲ್ ಪ್ರಾಚೆ ಹೇಳಿದ್ದಾರೆ. ಬಾಳಕ ಈ ಹಿಂದೆ ಟ್ರಾಫಿಕ್ ಸ್ಟಾಪ್ ಆದೇಶಗಳನ್ನು ಅನುಸರಿಸಲು ವಿಫಲನಾಗಿದ್ದಕ್ಕಾಗಿ ಪೊಲೀಸರಿಗೆ ಪರಿಚಿತನಾಗಿದ್ದ ಎಂದು ಪ್ರಾಚೆ ಸೇರಿಸಿದ್ದಾರೆ.
ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತುರ್ತು ಪರಿಸ್ಥಿತಿಯನ್ನು ಘೋಷಣೆಯನ್ನು ನಿಲ್ಲಿಸಿದ್ದರಿಂದ ದೇಶದ ಹಲವಾರು ಭಾಗಗಳಲ್ಲಿ ವ್ಯಾಪಕವಾದ ಬೆಂಕಿ ಹಚ್ಚುವಿಕೆ ಮತ್ತು ಲೂಟಿಗಳು ನಡೆಯುತ್ತಿವೆ ಎನ್ನಲಾಗಿದೆ. ಇಮ್ಯಾನುಯೆಲ್ ಮ್ಯಾಕ್ರನ್, ಅಶಾಂತಿಯ ಹರಡುವಿಕೆಗೆ ವೀಡಿಯೊ ಗೇಮ್‌ಗಳನ್ನು ದೂಷಿಸಿದ್ದು ಗಲಭೆಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಹದಿಹರೆಯದವರನ್ನು ಮನೆಯಲ್ಲಿಯೇ ಇರಿಸುವಂತೆ ಪೋಷಕರನ್ನು ಒತ್ತಾಯಿಸಿದರು.
ಶುಕ್ರವಾರ ರಾತ್ರಿ 270 ಜನರನ್ನು ಬಂಧಿಸಲಾಗಿದ್ದು, ಅಶಾಂತಿ ಪ್ರಾರಂಭವಾದಾಗಿನಿಂದ ಒಟ್ಟು 1,100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ದೇಶದ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಶನಿವಾರ ಮುಂಜಾನೆ ಹೇಳಿದ್ದಾರೆ. ಬಂಧಿತರ ಸರಾಸರಿ ವಯಸ್ಸು ಕೇವಲ 17 ವರ್ಷಗಳು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
