ಬೆಂಗಳೂರು:
ಗೂಗಲ್ ಇಂಡಿಯಾ ಸುಮಾರು 453 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಗೂಗಲ್ ಇಂಡಿಯಾ ಸಿಇಒ ಸುಂದರ್ ಪಿಚೈ ಉದ್ಯೋಗ ಕಳೆದು ಕೊಂಡವರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಗುರುವಾರ ತಡರಾತ್ರಿ ಈ ಮಾಹಿತಿಯನ್ನು ನೀಡಲಾಗಿದೆ.
ಮಾಹಿತಿ ಪ್ರಕಾರ ಈ ಇಮೇಲ್ ಅನ್ನು ಗೂಗಲ್ ಇಂಡಿಯಾದ ಮುಖ್ಯಸ್ಥ, ಉಪಾಧ್ಯಕ್ಷ ಸಂಜಯ್ ಗುಪ್ತಾ ಖಾತೆಯಿಂದ ಕಳುಹಿಸಲಾಗಿದೆ ಎಂದು ಬಿಜಿನೆಸ್‌ಲೈನ್ ವರದಿ ಮಾಡಿದೆ. ಆದರೆ ಈ ಇಮೇಲ್‌ನಲ್ಲಿ ಗೂಗಲ್ ಇಂಡಿಯಾ ಸಿಇಒ ಸುಂದರ್ ಪಿಚೈ ಹೇಳಿಕೆಗಳನ್ನು ಕೂಡಾ ಸೇರ್ಪಡೆ ಮಾಡಲಾಗಿದೆ.
ಕಳೆದ ತಿಂಗಳು ಪೋಷಕ ಸಂಸ್ಥೆ ಆಲ್ಫಾಬೆಟ್ ಇಂಕ್ ಗೂಗಲ್‌ನಲ್ಲಿ ಉದ್ಯೋಗ ಕಡಿತ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಜಾಗತಿಕವಾಗಿ ಸುಮಾರು ಶೇಕಡ 6ರಷ್ಟು ಅಂದರೆ 12,000ರಷ್ಟು ಉದ್ಯೋಗ ಕಡಿತವನ್ನು ಘೋಷಿಸಿತ್ತು. ಆದರೆ ಈಗ ಗೂಗಲ್ ಇಂಡಿಯಾ ಘೋಷಿಸಿದ 453 ಉದ್ಯೋಗ ಕಡಿತವು ಈ ಹಿಂದೆ ಘೋಷಿಸಿದ 12,000 ಉದ್ಯೋಗ ಕಡಿತದಲ್ಲೇ ಸೇರ್ಪಡೆಯಾಗುತ್ತದೆಯೇ, ಬೇರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ