480 ಕೋಟಿ ರೂ.ಗಳಷ್ಟು ರಾಜ್ಯ ಹೆದ್ದಾರಿ ಹಾಳು

 ಬೆಂಗಳೂರು:

      480 ಕೋಟಿ ರೂ.ಗಳಷ್ಟು ರಾಜ್ಯ ಹೆದ್ದಾರಿ ರಸ್ತೆಯು ಹಾಳಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

      ವಿಧಾನಸೌಧದಲ್ಲಿ ಮಾತನಾಡುತ್ತಿದ್ದ ಅವರು, 1550 ಕಿ.ಮೀ.ರಾಜ್ಯ ಹೆದ್ದಾರಿ ಹಾಗೂ 110 ಕಿ.ಮೀ. ರಸ್ತೆ ಹಾಳಾಗಿದೆ, ಈ ರಸ್ತೆಯನ್ನು ಸರಪಡಿಸಲು ರಾಜ್ಯದಲ್ಲಿ ಉತ್ತರ ವಲಯ-60.63, ದಕ್ಷಿಣವಲಯ-365.95, ಈಶಾನ್ಯ ವಲಯದಲ್ಲಿ 5.10 ಕೋಟಿ ರೂ.ಗಳು ಅಗತ್ಯವಾಗಿದೆ, ಸಂಪಾಜೆಯ 32 ಕಿ.ಮೀ ರಸ್ತೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದು, ಇದರ ದುರಸ್ತಿಗೆ 5-6 ತಿಂಗಳು ಬೇಕಾಗುತ್ತದೆ. ಈ ರಸ್ತೆಯಲ್ಲಿ ಸಣ್ಣ-ಪುಟ್ಟ ವಾಹನಗಳು ಓಡಾಡಬಹುದು ಆದರೂ ಕೂಡಾ ಕಷ್ಟವಾಗುತ್ತದೆ.

      ರಸ್ತೆ ದುರಸ್ತಿಗೊಳಿಸಿದ ನಂತರ ಇದರ ಗುಣಮಟ್ಟದ ಬಗ್ಗೆ ಪ್ರಮಾಣ ಪತ್ರ ನೀಡಲಾಗುವುದು ಎಂದ ಅವರು, ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ನಷ್ಟವಾಗಿದ್ದು, ರಸ್ತೆ ನಿರ್ಮಾಣಕ್ಕೆ ಈಗಾಗಲೇ 4 ವಿಭಾಗಗಳ ಅಧಿಕಾರಿಗಳನ್ನು ಹಾಗೂ 100 ಮಂದಿ ಇಂಜಿನಿಯರ್ಸ್ ಅವರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap