ಮೊದಲ ಮಳೆಗೆ 4 ಮಂದಿ ಬಲಿ….!

ಗದಗ

    ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯೇ ವರ್ಷದ ಮೊದಲ ಮಳೆ ಎಂದು ತಿಳಿದು ಬಂದಿದೆ. ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳು ಮತ್ತು ಗದಗಿನಲ್ಲಿ ಮಳೆ ಬಿದ್ದಿದೆ. ಈ ಮಳೆಯಿಂದಾಗಿ ಗದಗ ಜಿಲ್ಲೆಯ ಲಿಂಗದಾಳ ಗ್ರಾಮದಲ್ಲಿ ಗುಡುಗು, ಸಿಡಿಲು ಸಹಿತ ಜೋರು ಮಳೆ ದಾಖಲಾಗಿದೆ.

    ಈ ಮಹಾಮಳೆಗೆ ಗ್ರಾಮದ ಜಮೀನೊಂದರಲ್ಲಿ ಕುರಿತು ಕಾಯುತ್ತಿದ್ದ ಯುವಕರಿಗೆ ಸಿಡಿಲು ಬಡಿದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಮೃತ ಕುರಿಗಾರರನ್ನು ಶರಣಪ್ಪ ಪುರದ (20) ಮತ್ತು ದೇವರಾಜ್ ಬಾಡಗಿ (16) ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

     ಈ ಮೃತರಿಬ್ಬರಿಗೆ ಸಿಡಿಲು ಬಡಿದ ವೇಳೆ ಅವರ ಸಮೀಪದಲ್ಲೇ ಇದ್ದ ಮತ್ತೊಬ್ಬ 13 ವರ್ಷದ ಬಾಲಕನಿಗೆ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನೂ ಘಟನೆಯಲ್ಲಿ ನಾಲ್ಕು ಕುರಿಗಳು ಒಂದು ಆಡು ಹಸ ಮೃತಪಟ್ಟಿದೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

     ಅದೇ ರೀತಿ ಬಾಗಲಕೋಟೆ ವ್ಯಾಪ್ತಿಯಲ್ಲಿ ಸಹ ಶುಕ್ರವಾರ ಅಧಿಕ ಮಳೆ ಆಗಿದೆ. ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಮನೆಗೇ ಸಿಡಿಲು ಬಡಿದಿದೆ. ಹೀಗಾಗಿ ಮನೆಯ ಮೇಲ್ಛಾವಣಿ ನಾಶವಾಗಿದೆ. ಇದರಿಂದ ಆ ಮನೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಇದರಿಂದ ಇಡಿ ಗ್ರಾಮಸ್ಥರೆ ಮಳೆಗೆ ಭಯಭೀತರಾಗಿದ್ದಾರೆ. ಮೊದಲ ಮಳೆಗೆ ಇಷ್ಟೆಲ್ಲ ಆವಾಂತರಗಳು ಸಂಭವಿಸುತ್ತಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಸುರಿಯಲಿರುವ ಮಳೆಗೆ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link