5ನೇ ದಿನಕ್ಕೆ ವಿಸರ್ಜನೆಯಾದ 89 ಸಾರ್ವಜನಿಕ ಗಣಪತಿ.

ಹರಪನಹಳ್ಳಿ:

     ಪಟ್ಟದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಐದನೇ ದಿನಕ್ಕೆ ಸೋಮುವಾರ ವಿಸರ್ಜನೆ ಮಾಡಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದ್ದ ಗಣೇಶನ ಮೂರ್ತಿಗಳನ್ನು ಟ್ರಾಕ್ಟರ್‍ಗಳಲ್ಲಿ ಕೂರಿಸಿಕೊಂಡು, ಧ್ವನಿವರ್ಧಕ(ನಾಲ್ಕು ಡಿಜೆ) ಅಳವಡಿಸಿಕೊಂಡು ಸಿನಿಮಾ ಗೀತೆಗಳಿಗೆ ಯುವಕರು ಹೆಜ್ಜೆ ಹಾಕಿದರೆ, ಮತ್ತೂಂದೆಡೆ ಸಾಂಪ್ರದಾಯಿಕ ಮೇಳಗಳ ನಾದಕ್ಕೆ ಹೆಜ್ಜೆ ಹಾಕುತ್ತಾ ಪಟಾಕಿ ಸಿಡಿಸುತ್ತಾ ಅದ್ದೂರಿಯಾಗಿ ಗಣೇಶ ಮೂರ್ತಿಗಳ ಮೆರವಣಿಗೆ ನಡೆಸಿದರು.

      ಪ್ರವಾಸಿಮಂದಿರ ವೃತ್ತ, ವಾಲ್ಮೀಕಿನಗರ, ಜೋಷಿಕೇರಿ, ಹಳೇ ಬಸ್‍ನಿಲ್ದಾಣ, ಆಶ್ರಯಕ್ಯಾಂಪ್, ಕೊಟ್ಟೂರು ರಸ್ತೆಯ ಗಣಪತಿ ಹಾಗೂ ಪಟ್ಟಣದ ವಿವಿಧ ಕಡೆಗಳ ಗಣಪತಿ ಸೇರಿದಂತೆ ನಾಲ್ಕು ಹೋಬಳಿಯ ಗ್ರಾಮಾಂತರ ಪ್ರದೇಶ ಒಳಗೊಂಡು ತಾಲೂಕಿನ ವಿವಿಧೆಡೆ ಒಟ್ಟು 363 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗಿದ್ದು, ಸೋಮುವಾರ ಐದನೇ ದಿನಕ್ಕೆ 89, ಏಳನೇ ದಿನಕ್ಕೆ ಅರಸಿಕೇರಿಯ 2 ಗಣೇಶ ಮೂರ್ತಿಗಳು, 9ನೇ ದಿನಕ್ಕೆ 4, ಹಾಗೂ 11ನೇ ದಿನಕ್ಕೆ ಎರಡು ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ.
ಕೆಲವು ಪಟ್ಟಣದ ಐತಿಹಾಸಿಕ ಹಿರೆಕೆರೆಯಲ್ಲಿ, ನಾಯಕನ ಕೆರೆ ವಿಸರ್ಜನೆಗೊಂಡರೆ, ಇನ್ನು ಕೆಲವು ಪಟ್ಟಣಕ್ಕೆ ಸಮೀಪವಿರುವ ಕೆರೆಗಳಲ್ಲಿ ವಿಸರ್ಜಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಸೂಕ್ಷ ಮತ್ತು ಅತಿಸೂಕ್ಷಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link