ಜಾರ್ಖಂಡ್: ವಾಹನ ಪಲ್ಟಿ : 5 ಸಾವು

ಜಾರ್ಖಂಡ್:
     ಚಾಲಕನೋರ್ವ ಕಾರು ಚಲಾಯಿಸುತ್ತಿದ್ದ
ಸಂದರ್ಭದಲ್ಲಿ ಸೆಲ್ಸಿ ತೆಗೆದುಕೊಳ್ಳಲು ಯತ್ನಿಸಿದ
ವೇಳೆ ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ
ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ
ಐದು ಜನ ಮೃತಪಟ್ಟ ದಾರುಣ ಘಟನೆ
ನಡೆದಿದೆ ಎಂದು ವರದಿಯಾಗಿದೆ.

      ಈ ಘಟನೆ ಜಾರ್ಖಂಡ್ ರಾಜ್ಯದ
ದಿಯೋಘರ್‌ನ ಸಿಕಾತಿಯಾ ಬ್ಯಾರೆಜ್‌ನಲ್ಲಿರುವ
ಸೇತುವೆಯಲ್ಲಿ ಸಂಭವಿಸಿದೆ ಎಂದು
ವರದಿಯಿಂದ ತಿಳಿದುಬಂದಿದೆ.
 
      ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ
ನೆರವಿನಿಂದ ಕಾರನ್ನು ನದಿಯಿಂದ ಹೊರಗೆ
ತೆಗೆದಿದ್ದಾರೆ ಎನ್ನಲಾಗಿದೆ.ಇನ್ನು ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

      ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ
ದಿಯೋಘರ್ ಸದಾರ್ ಆಸ್ಪತ್ರೆಗೆ ಸ್ಥಳಾಂತರ
ಮಾಡಲಾಗಿದೆ ಎಂದು ವರದಿಯಾಗಿದೆ.

Recent Articles

spot_img

Related Stories

Share via
Copy link
Powered by Social Snap