ನಾಲೆಗೆ ಉರುಳಿದ ಕಾರು: ಐವರ ದುರ್ಮರಣ

ತುಮಕೂರು:

     ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿಬಿದ್ದ ಪರಿಣಾಮ ಐವರು ಜಲಸಮಾಧಿಯಾಗಿರುವ ಘಟನೆ ಪಾಂಡವಪುರದ ವಿಶ್ವೇಶ್ವರಯ್ಯ ನಾಲೆಯ ಬಳಿ ನಡೆದಿದೆ. ಮೃತಪಟ್ಟವರನ್ನು ತಿಪಟೂರು ತಾಲ್ಲೂಕಿನ ಕೈದಾಳು ಗ್ರಾಮದವರು ಎಂದು ತಿಳಿದು ಬಂದಿದೆ.

    ಮೈಸೂರಿನಲ್ಲಿ ಬೀಗರ ಔತಣಕೂಟವನ್ನು ಮುಗಿಸಿಕೊಂಡು ಪಾಂಡವಪುರ ಮಾರ್ಗವಾಗಿ ತುಮಕೂರಿನ ಕಡೆಗೆ ಶಿಫ್ಟ್ ಕಾರಿನಲ್ಲಿ ಆಗಮಿಸುತ್ತಿದ್ದ ವೇಳೆ ಬನ್ನಘಟ್ಟದ ತಿರುವಿನಲ್ಲಿ ಕಾರಿಗೆ ಅಡ್ಡಲಾಗಿ ಬಂದ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಮೃತರನ್ನು ತಿಪಟೂರು ತಾಲ್ಲೂಕಿನ ಕೈದಾಳು ಗ್ರಾಮದ ಚಂದ್ರಪ್ಪ (61), ಧನಂಜಯ (55), ಕೃಷ್ಣಪ್ಪ (60) ಬಾಬು ಮತ್ತು ಜಯಣ್ಣ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರ ಐವರ ಪೈಕಿ ಒಬ್ಬರ ಫೋನ್ ಆನ್ ಆಗಿದ್ದರಿಂದ ಕುಟುಂಬದವರಿಗೆ ದುರಂತದ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಸಂಬಂಧಿಕರು ಮೃತರನ್ನು ಗುರುತಿಸಿ ಇವರೆಲ್ಲ ಕೈದಾಳ ಗ್ರಾಮಕ್ಕೆ ಸೇರಿದವರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶೋಧ ಕಾರ್ಯದ ವೇಳೆ ಸಾಕಷ್ಟು ಮಂದಿ ಜಮಾಯಿಸಿದ್ದರಿಂದ ಶೋಧನಾ ಕಾರ್ಯಕ್ಕೆ ಅಡಚಣೆಯಾಯಿತು . ಮೃತರ ಶವಗಳನ್ನು ಹೊರ ತೆಗೆಯುತ್ತಿದ್ದಂತೆ ನೆರೆದಿದ್ದ ಜನರ ಕಣ್ಣುಗಳಲ್ಲಿ ನೀರು ತುಂಬಿ ಬಂದವು. ಮೂರುಗಂಟೆಗಳ ಶೋಧಾನಾ ಕಾರ್ಯದ ಬಳಿಕ ಅಗ್ನಿಶಾಮಕ ದಳದವರು ಕ್ರೇನ್ ಸಹಾಯದಿಂದ ಮೃತದೇಹಗಳನ್ನು ಹೊರಕ್ಕೆ ತೆಗೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap