ಬೆಂಗಳೂರು
ಬೆಂಗಳೂರಿನಲ್ಲಿ ಇತ್ತೀಚೆಗೆ ಮಾದಕವಸ್ತುಗಳ ಮಾರಾಟ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ 8.5 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದ್ದು ಐವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಲಾಗಿದೆ.
ಎರಡು ಪ್ರಕರಣಗಳಲ್ಲಿ ಎಂಡಿಎಂಎ ಮತ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಐವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಲಾಗಿದೆ. ಈ ಇಬ್ಬರಿಂದ 8.5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಗೋವಾ ಮತ್ತು ವಿದೇಶದಿಂದ ಡ್ರಗ್ಸ್ ತರಿಸಲಾಗಿದೆ ಎಂದು ತಿಳಿದುಬಂದಿದೆ.
ವಿವಿ ಪುರಂ ಪೊಲೀಸರು ಬಂಧಿತ ವ್ಯಕ್ತಿಯನ್ನು ಲಾರೆನ್ಸ್ ಎಜೆನ್‌ವೋಕ್ (35) ಮತ್ತು ಚುಕ್ವುನೆಜಿಮ್ ಥ್ಯಾಂಕ್‌ಗೋಡ್ ಒನೆಕಾಚಿ ಅಲಿಯಾಸ್ ಬ್ರೈಟ್ (36) ಎಂದು ಗುರುತಿಸಿದ್ದಾರೆ. ಇವರಿಬ್ಬರನ್ನು ಬಂಧಿಸಿ 1.8 ಕೆಜಿ ವೈಟ್ ಎಂಡಿಎಂಎ, 1.2 ಕೆಜಿ ಬ್ರೌನ್ ಎಂಡಿಎಂಎ ಮತ್ತು 310 ಗ್ರಾಂ ಕೊಕೇನ್ ಒಟ್ಟು 8.5 ಕೋಟಿ ಮೌಲ್ಯದ ಮಾದಕವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬೆಂಗಳೂರಿನ ಪೂರ್ವ ಬಿದರಹಳ್ಳಿಯ ಮಾವು ಲೇಔಟ್‌ನಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿದೆ. ಮೂರು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾ ಅವಧಿ ಮುಗಿದ ನಂತರ ಅವರು ನಗರದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಲ್ಲಿ ಲಾರೆನ್ಸ್ ಎಂಬಾತನನ್ನು ಬೆಂಗಳೂರು ಪೊಲೀಸರು ಈಗಾಗಲೇ ಬಂಧಿಸಿದ್ದರು. ಫೆಬ್ರವರಿ 2022 ರಲ್ಲಿ ಬಂಧಿತನಾಗಿದ್ದ ಲಾರೆನ್ಸ್ ಅವರನ್ನು ಸೆಪ್ಟೆಂಬರ್ 2022 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಳಿಕ ಈತ ಜಾಮೀನನ ಮೇಲೆ ಹೊರಬಂದಿದ್ದ ಎನ್ನಲಾಗಿದೆ. ಮತ್ತೆ ಈತ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಜಯನಗರ ಪೊಲೀಸರು ಭಾನುವಾರ ಮೂವರು ನೈಜೀರಿಯನ್ನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹ್ಯಾಸ್ಲಿ (32) ಸ್ಯಾಂಡಿ (35) ಮತ್ತು ನಂಜಿ ಇಮ್ಯಾನುಯೆಲ್ (29) ಏಪ್ರಿಲ್ 27 ರಂದು ಬಂಧಿಸಲ್ಪಟ್ಟಿದ್ದರೆ, ಲಾರೆನ್ಸ್ ಎಜೆನ್‌ವೋಕ್ (35) ಮತ್ತು ಚುಕ್ವುನೆಜಿಮ್ ಥ್ಯಾಂಕ್‌ಗೋಡ್ ಒನೆಕಾಚಿ ಅಲಿಯಾಸ್ ಬ್ರೈಟ್ (36) ಭಾನುವಾರ ಬಂಧಿಸಲಾಗಿದೆ. ಇವರಿಂದ 1.2 ಕೋಟಿ ಮೌಲ್ಯದ 1.2 ಕೆಜಿ ಎಂಡಿಎಂಎ ಮತ್ತು 4 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಪೆಡ್ಲರ್‌ಗಳು ಡಾರ್ಕ್‌ನೆಟ್ ಮೂಲಕ ಮಾದಕ ದ್ರವ್ಯಗಳನ್ನು ಪಡೆಯುತ್ತಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ (ದಕ್ಷಿಣ) ಪಿ ಕೃಷ್ಣಕಾಂತ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ