ಭೋಪಾಲ್:
ಐದು ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಕುತೂಹಲಕಾರಿ ಘಟನೆಯೊಂದು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಮುಗ್ಧ ಬಾಲಕ ಪೊಲೀಸ್ ಠಾಣೆಗೆ ಬಂದು ತಂದೆಯ ವಿರುದ್ಧ ದೂರುಗಳ ಸುರಿಮಳೆಗೈದು ಎಫ್‌ಐಆರ್ ದಾಖಲಿಸಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆಗ ಬಾಲಕ ಮೊದಲು ತನ್ನ ಹೆಸರನ್ನು ಹೇಳಿ ಬಳಿಕ ಪಟಪಟನೇ ತಂದೆಯ ವಿರುದ್ಧ ದೂರಿನ ಸುರಿಮಳೆಗೈಯುತ್ತಾನೆ. ನನ್ನ ತಂದೆ ಆಟವಾಡಲು ನದಿಗೆ ಹೋಗದಂತೆ ತಡೆಯುತ್ತಾರೆ. ಅಲ್ಲದೇ ಬೀದಿಯಲ್ಲಿಯೂ ಆಟವಾಡಲು ಬಿಡುತ್ತಿಲ್ಲ ಎಂದು ವಿವರಿಸಿದ್ದಾನೆ. ಬಾಲಕನ ಮುಗ್ಧ ಮಾತುಗಳನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ವೀಡಿಯೋವನ್ನು ಸುರೇಶ್ ಸಿಂಗ್ ಎಂಬ ಹೆಸರಿನ ‘ಎಕ್ಸ್’ ಬಳಕೆದಾರರು ಹಂಚಿಕೊಂಡಿದ್ದಾರೆ. ಅಲ್ಲದೇ ಮಧ್ಯಪ್ರದೇಶದ ಧಾರ್‌ನಲ್ಲಿ ಐದು ವರ್ಷದ ಬಾಲಕ ತನ್ನ ಸ್ವಂತ ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾನೆ. ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದ ಮಗುವನ್ನು ತಂದೆ ತಡೆದು ಛೀಮಾರಿ ಹಾಕಿದ್ದಾರೆ. ಕೋಪಗೊಂಡ ಮಗು ತನ್ನ ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ.ಸದ್ಯ ಈ ವೀಡಿಯೋ ನೋಡಿದ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
