ಇಂದು ಅಣ್ಣಾವ್ರ ಕುಟುಂಬ ಕಂಠೀರವ ಸ್ಟುಡಿಯೋ(Kanteerava Studio)ಗೆ ಬಂದು ಸಮಾಧಿಗೆ . ಪೂಜೆ ಸಲ್ಲಿಸಿದ್ದಾರೆ. 3 ತಿಂಗಳ ಹಿನ್ನೆಲೆ ಅಪ್ಪು ಸಮಾಧಿಗೆ ಹೂಗಳಿಂದ ಅಲಂಕಾರ ಮಾಡಲಾಗಿತ್ತು.ಅಭಿಮಾನಿಗಳ ದಂಡು ಪುನೀತ್ ಅವರನ್ನು ನೋಡಲು ಹರಿದು ಬರುತ್ತಿದೆ.
ಕನ್ನಡದ ಕಣ್ಮಣಿ ನಟ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ (Power Star Puneeth Rajkumar) ನಮ್ಮನ್ನಗಲಿ ಮೂರು ತಿಂಗಳಾಗಿದೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ. ಅವರನ್ನ ನೆನೆಯದ ದಿನಗಳೇ ಇಲ್ಲ ಎನ್ನುವಂತಾಗಿದೆ. ಅವರನ್ನ ಮರೆಯುವುದು ಅಸಾಧ್ಯ. ಜನಮಾನಸದಲ್ಲಿ ಅಪ್ಪು (Appu) ಎಂದಿಗೂ ಅಮರ ಎಂದರೆ ತಪ್ಪಲ್ಲ.
ಅವರು ಇಲ್ಲ ಎನ್ನುವ ಸುದ್ದಿ ಬಂದಾಗಿನಿಂದಲೂ ಅವರ ಬಗ್ಗೆ ಒಂದೆಲ್ಲ ಒಂದು ವಿಚಾರಗಳು ಹೊರಬರುತ್ತಿವೆ. ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ. ಹೀಗಾಗಿ ಇಂದಿನಿ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಅಣ್ಣಾವ್ರ ಕುಟುಂಬ 500 ಸಸಿಗಳನ್ನು ಅಪ್ಪು ಅಭಿಮಾನಿಗಳಿಗೆ ನೀಡಿದ್ದಾರೆ.500 ಸಸಿಗಳನ್ನು ನೀಡಿದ ರಾಘಣ್ಣ, ಅಶ್ವಿನಿ ಪುನೀತ್ ರಾಜ್ಕುಮಾರ್!
ಅಪ್ಪು ಸಮಾಧಿ ಬಳಿ ಅಪ್ಪು ಕುಟುಂಬಸ್ಥು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನ ನಡೆಸಿದ್ದಾರೆ. ಇದರಂತೆ, 500 ಸಸಿಗಳನ್ನು ಅಭಿಮಾನಿಗಳಿಗೆ ನೀಡಲಾಗಿದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ.
ಅಪ್ಪು ಸಮಾದಿ ಎದುರು ಸ್ಕಿಲ್ ಡಿಪಾರ್ಟ್ಮೆಂಟ್ ವತಿಯಿಂದ ಸಂಜೆ 6 ಘಂಟೆಗೆ ದೀಪೋತ್ಸವ ನಡೆಯಲಿದೆ. ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ನಟ ಶಿವರಾಜ್ಕುಮಾರ್ ಮೈಸೂರಿನಲ್ಲಿ ಚಿತ್ರದ ಕೆಲಸಗಳಲ್ಲಿದ್ದಾರೆ. ಹೀಗಾಗಿ ಶಿವಣ್ಣ ಬರುವುದು ಖಚಿತವಾಗಿಲ್ಲ.
ಪೂಜೆ ನೆರವೇರಿಸಿದ ಬಳಿಕ ಅಪ್ಪು ಬಗ್ಗೆ ರಾಘಣ್ಣ ಮಾತನಾಡಿದ್ದಾರೆ. ‘ಅಪ್ಪು ಅಭಿಮಾನಿಗಳು ಭಕ್ತರಾಗ್ತಿದ್ದಾರೆ. ದಿನದಿಂದ ದಿನಕ್ಕೆ ಪುಣ್ಯಭೂಮಿಗೆ ಬರ್ತಿರುವ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಅಭಿಮಾನಿಗಳಿಗೆ ಗಿಡ ಕೊಟ್ಟು ನೆಡಿಸಲು ಯೋಚನೆ ಮಾಡಲಾಗಿದೆ. ಅಪ್ಪು ಹುಟ್ಟುಹಬ್ಬದ ವೇಳೆಗೆ ಒಂದು ಲಕ್ಷ ಗಿಡ ನೇಡಲು ಕೆಲಸ ಶುರುವಾಗಿದೆ.
ಅಪ್ಪಾಜಿ ಅವರು ಹೇಳಿದ ಹಾಗೆ ನಾನು ಮೊದಲು ಗಿಡ ನೆಟ್ಟು ಆ ಕೆಲಸಕ್ಕೆ ಚಾಲನೆ ಕೊಡಲಾಗಿದೆ. ಅಪ್ಪು ಅಗಲಿಕೆಯ ಮುನ್ನ ಕಾಡಿನಲ್ಲಿ ಕೆಲಸ ಮಾಡಿದ್ರು.ಕಾಡು ಹಸಿರು ಅಪ್ಪುಗೆ ಬಹಳ ಇಷ್ಟ ಹಾಗಾಗಿ ಗಿಡ ನೀಡುವ ಕೆಲಸ ಶುರುವಾಗಿದೆ ಎಂದು ರಾಘಣ್ಣ ಹೇಳಿದರು.
ಇನ್ನೂ ಅಪ್ಪು ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್, ವಿಜಯ್ ರಾಘವೇಂದ್ರ, ಧೀರನ್ ರಾಮ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ಧೃತಿ, ಪುನೀತ್ ಸಹೋದರಿ ಲಕ್ಷ್ಮೀ ಹಾಗೂ ಎಸ್ ಎ ಗೋವಿಂದ ರಾಜು ಅವರು ಪೂಜೆ ಸಲ್ಲಿಸಿದರು.
ಪೂಜೆ ಬಳಿಕ ಸಮಾಧಿ ಆವರಣದಲ್ಲಿ ರಾಘವೇಂದ್ರ ರಾಜ್ಕುಮಾರ್ ಗಿಡ ನೆಟ್ಟರು.ಇದಾದ ಬಳಿಕ ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸಸಿ ವಿತರಿಸಿದರು. ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡಗಳನ್ನು ಅಭಿಮಾನಿಗಳಿಗೆ ಉಡುಗೊರೆ ನೀಡಿದರು.