1 ಕೆಜಿ ಅಕ್ಕಿ 500, ಅರ್ಧ ಲೀಟರ್ ಹಾಲು 790 ರೂ.!

ಶ್ರೀಲಂಕಾ:

ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ ಹೋಗಿದ್ದು ಜನಸಾಮಾನ್ಯರಿಗೆ ತಿನ್ನಲು ಅನ್ನ ಸಿಗದೆ ಪರದಾಡುವಂತಾಗಿದೆ.ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಇಂದು ದೇಶವನ್ನು ದಿವಾಳಿ ಅಂಚಿಗೆ ತಳ್ಳಿದೆ. ಜನಸಾಮಾನ್ಯರು ತುತ್ತು ಅನ್ನಕ್ಕೂ ಕಿ.ಮೀ.ಗಟ್ಟಲೇ ಕ್ಯೂ ನಿಂತು ಕೊಂಡುಕೊಳ್ಳಬೇಕಿದೆ.ಅದರಲ್ಲೂ ದುಡ್ಡು ಕೊಡ್ತಿವಿ ಅಂದ್ರು ಅಗತ್ಯ ವಸ್ತುಗಳು ಸಿಗದಂತಾಗಿದೆ.

ಒಂದು ಕೆಜಿ ಅಕ್ಕಿ 500 ಆದರೆ ಅರ್ಧ ಲೀಟರ್ ಹಾಲಿನ ಬೆಲೆ 790 ರೂ. (ಶ್ರೀಲಂಕಾದ ರೂಪಾಯಿ) ಗಳಷ್ಟಾಗಿದೆ. ಇನ್ನೂ ಪೆಟ್ರೋಲ್ ಗಾಗಿ ಬಂಕ್ ಮುಂದೆ ಕಿ.ಮೀ.ದೂರದಷ್ಟು ಕ್ಯೂ ಇರುವ ದೃಶ್ಯಗಳು ಕಾಣಸಿಗುತ್ತಿವೆ.ಹಣ ಕೊಟ್ಟರು ಅಗತ್ಯ ವಸ್ತುಗಳು ಸಿಗದಿರುವುದರಿಂದ ಸರ್ಕಾರದ ಮೇಲೆ‌ ಜನ ಸಿಟ್ಟಿಗೆದ್ದಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್​ಕೆ ಸಜ್ಜು?

ಎಲ್ಲೆಡೆ ಪ್ರತಿಭಟನೆ ಶುರುವಾಗಿದ್ದು ಪರಿಸ್ಥಿತಿ ನಿಭಾಯಿಸಲು ಶ್ರೀಲಂಕಾ ಸರ್ಕಾರ ಸಂಪೂರ್ಣ ವಿಫಲವಾಗಿದೆ.‌ಸರ್ಕಾರದ ಬಹುಮುಖ್ಯ ಆದಾಯದ ಮೂಲವಾದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.‌

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap