ಬೆಂಗಳೂರು:
ರಾಜಧಾನಿ ಬೆಂಗಳೂರು ಮಂದಿ ಬೆಚ್ಚಿಬೀಳುವಂತೆ ಭಾರೀ ವ್ಯವಸ್ಥಿತವಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್ ಆಗಿದೆ. ಬೆಂಗಳೂರು ಸುತ್ತಮುತ್ತ ಬೈಕ್ಗಳ ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ, ವಾಹನಗಳ್ಳರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಿದ್ದ, ಮನೆಯಲ್ಲೇ ಕದ್ದ ಬೈಕ್ಗಳ ದಾಖಲೆ ತಯಾರು ಮಾಡ್ತಿದ್ದ ಐನಾತಿ ಪೊಲೀಸ್ ಕಾನ್ಸ್ಟೇಬಲ್ನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಕ್ಕೆಲ್ಲ ಸಪೋರ್ಟ್ ಮಾಡ್ತಾ ಇದ್ದಿದ್ದೇ ಕಾನ್ಸ್ಟೇಬಲ್ ಹೊನ್ನಪ್ಪ. ಕದ್ದ ವಾಹನಗಳನ್ನು ಆಲ್ಟ್ರೇಶನ್ ಮಾಡಿಸಿ, ಮಾರಾಟ ಮಾಡ್ತಿದ್ದ ರಮೇಶ್. ಕದ್ದ ಬೈಕ್ಗಳ ದಾಖಲೆಗಳನ್ನು ಕಾನ್ಸ್ಟೇಬಲ್ ಹೊನ್ನಪ್ಪನ ಮನೆಯಲ್ಲೇ ತಯಾರು ಮಾಡ್ತಿದ್ದರು. ಇದಕ್ಕಾಗಿ ಮನೆಯಲ್ಲಿ ಲ್ಯಾಪ್ಟಾಪ್ ಮತ್ತು ಪ್ರಿಂಟರ್ ಇಟ್ಟುಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಯಶಸ್ವೀ ಕಾರ್ಯಾಚರಣೆ ನಡೆಸಿರುವ ಮಾಗಡಿ ರಸ್ತೆ ಪೊಲೀಸರು ಬಂಧಿತರಿಂದ 77 ಲಕ್ಷ ಮೌಲ್ಯದ 53 ಬೈಕ್ ಗಳು ವಶಕ್ಕೆ ಪಡೆದಿದ್ದಾರೆ.
ಯಶಸ್ವೀ ಕಾರ್ಯಾಚರಣೆ ನಡೆಸಿರುವ ಮಾಗಡಿ ರಸ್ತೆ ಪೊಲೀಸರು ಬಂಧಿತರಿಂದ 77 ಲಕ್ಷ ಮೌಲ್ಯದ 53 ಬೈಕ್ ವಶಕ್ಕೆ ಪಡೆದಿದ್ದಾರೆ
ವಿದ್ಯಾರಣ್ಯಪುರ ಕಾನ್ಸ್ಟೇಬಲ್ ಹೊನ್ನಪ್ಪನ ಇಡೀ ಜಾತಕ
ಬಂಧಿತ ಯುವ ಪೊಲೀಸ್ ಕಾನ್ಸ್ಟೇಬಲ್ ಹೊನ್ನಪ್ಪನ ಮತ್ತೊಂದು ಹೆಸರು ರವಿ ಅಂತಾನೂ ಇದೆ. ಕಾನ್ಸ್ಟೇಬಲ್ ಹೊನ್ನಪ್ಪ ರವಿ ಅಪ್ರಾಪ್ತ ಯುವಕರನ್ನ ಬಳಸಿಕೊಂಡು ಬೆಲೆಬಾಳುವ ಬೈಕ್ಗಳನ್ನ ಕಳ್ಳತನ ಮಾಡಿಸ್ತಿದ್ದ. ಕಾನ್ಸ್ಟೇಬಲ್ ಹೊನ್ನಪ್ಪ ಅಂಡ್ ಗ್ಯಾಂಗ್ನಿಂದ ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣೆಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್ ಗಳ ಕಳ್ಳತನವಾಗಿದೆ. ಕಳ್ಳತನ ಮಾಡಿಸುತ್ತಿದ್ದ ಬೈಕ್ಗಳನ್ನ ಖುದ್ದು ಕಾನ್ಸ್ಟೇಬಲ್ ಹೊನ್ನಪ್ಪ ಕಾನ್ ಸ್ಟೇಬಲ್ ಮಾರಾಟ ಮಾಡ್ತಿದ್ದ.
ಐಪಿಎಸ್ ನೆರಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವುದು ಬಿಟ್ಟು ಯುವ ಪೇದೆ ಹೊನ್ನಪ್ಪ ಮಾಡಿದ್ದು ಇದು!
ಹೊನ್ನಪ್ಪ ರವಿ 2016ನೇ ಬ್ಯಾಚ್ ಸಿವಿಲ್ ಕಾನ್ ಸ್ಟೇಬಲ್. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ. ಹೊನ್ನಪ್ಪ ಪ್ರಸ್ತುತ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿದ್ದ! ಇಂತಿಪ್ಪ ಯುವ ಪೇದೆ ಹೊನ್ನಪ್ಪ ಐಪಿಎಸ್ ನೆರಳಲ್ಲಿ ಶಿಸ್ತು ಸಂಯಮದಿಂದ ಪ್ರಾಮಾಣಿಕ ಸೇವೆ ಸಲ್ಲಿಸುವುದನ್ನು ಬಿಟ್ಟು ರಾಜಸ್ಥಾನದ ರಮೇಶ್ ಮತ್ತು ಇನ್ನಿಬ್ಬರು ಅಪ್ರಾಪ್ತ ವಯಸ್ಸಿನವರ ಜೊತೆ ಸೇರಿ ಮಾಡಬಾರದ್ದನ್ನು ಮಾಡತೊಡಗಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಸಿನವರ ಪಾತಕಿಗಳು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ದರು. ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ಹಣವನ್ನ ಹುಡುಗರಿಗೆ ನೀಡ್ತಿದ್ದ ಪೇದೆ ಹೊನ್ನಪ್ಪ. ಸದ್ಯ ಪೇದೆ ಹೊನ್ನಪ್ಪ ನನ್ನು ವಶಕ್ಕೆ ಪಡೆದು ಮಾಗಡಿ ರೋಡ್ ಪೊಲೀಸ್ರು ವಿಚಾರಣೆ ನಡೆಸ್ತಿದಾರೆ.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದೇನು?:
ಬೆಲೆಬಾಳುವ ಬೈಕ್ಗಳ ಕಳ್ಳತನಕ್ಕೆ ನೇರವಾಗಿ ಕುಮ್ಮಕ್ಕು ನೀಡುತ್ತಿದ್ದ ಐನಾತಿ ಪೊಲೀಸ್ ಪೇದೆ ಹೊನ್ನಪ್ಪನ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ತಮ್ಮ ವ್ಯಾಪ್ತಿಯ ಮಾಗಡಿ ರೋಡ್ ಠಾಣೆ ಸಿಬ್ಬಂದಿಗಳನ್ನ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅಭಿನಂದಿಸಿದ್ದಾರೆ. ನಂದಿನಿ ಲೇ ಔಟ್, ಯಶವಂತಪುರ, ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ಗಳ ಕಳ್ಳತನವಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಇಬ್ಬರು ಅಪ್ರಾಪ್ತ ವಯಸ್ಸಿನರನ್ನ ಬಳಸಿಕೊಂಡು ಕಳ್ಳತನ ಮಾಡಿಸ್ತಿದ್ದ. ಅಷ್ಟೇ ಅಲ್ಲದೇ ತುಂಬಾ ದುಬಾರಿ ಬೈಕ್ ಗಳನ್ನ ಅತಿ ಕಡಿಮೆ ಬೆಲೆಗೆ ಮಾರುತ್ತಿದ್ದ.
ನಕಲಿ ಆರ್ ಸಿ ಕಾರ್ಡ್ ನೀಡಿ ಗಾಡಿ ಮಾರಾಟ ಮಾಡುತ್ತಿದ್ದ. ಒರಿಜಿನಲ್ ಆರ್ ಸಿ ಕಾರ್ಡ್ ಕೇಳಿದ್ರೆ ಬೈಕ್ ಮೇಲೆ ಲೋನ್ ಇದೆ ಮುಂದಿನ ವಾರ ಕೊಡೋದಾಗಿ ನಂಬಿಸಿ ಮಾರಾಟ ಮಾಡ್ತಿದ್ದ. ರಮೇಶ್ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಈತ ಕೆಲವು ಬೈಕ್ಗಳನ್ನ ರಾಜಸ್ಥಾನದಲ್ಲಿ ಸಹ ಮಾರಾಟ ಮಾಡಲು ಫ್ಲಾನ್ ಮಾಡಿಕೊಂಡಿದ್ದ. ಆದರೆ ಅಷ್ಟು ಹೊತ್ತಿಗೆ ಮಾಗಡಿ ರೋಡ್ ಪೊಲೀಸರು ಸಖತ್ ಬೇಟೆಯಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ