56 ಮುಸ್ಲಿಂ ರಾಷ್ಟ್ರಗಳು ಕಾಶ್ಮೀರಿಗಳಿಗಾಗಿ ಏನೂ ಮಾಡಲಿಲ್ಲ: ಇಮ್ರಾನ್ ಖಾನ್

ಇಸ್ಲಾಮಾಬಾದ್:

ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯಾದ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ) ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ನಿನ್ನೆ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರದ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು.

‘ನಮ್ಮ ಕಡೆಯಿಂದ ಯಾವುದೇ ಒತ್ತಡವನ್ನು ಅನುಭವಿಸದ ಕಾರಣ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದೆ’ ಎಂದು ಇಮ್ರಾನ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಪ್ಯಾಲೆಸ್ತೀನ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದ ಕುರಿತು ಮಾತನಾಡಿದ ಪಾಕಿಸ್ತಾನಿ ಪ್ರಧಾನಿ, ‘ನಾವು ಜಗತ್ತಿನಲ್ಲಿ 1.5 ಶತಕೋಟಿ ಮುಸ್ಲಿಮರಿದ್ದೇವೆ. ಆದರೆ ಇಲ್ಲಿನ ಜನರಿಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಕಾಶ್ಮೀರ ಮತ್ತು ಪ್ಯಾಲೆಸ್ತೀನ್ ಜನರನ್ನು ನಿರಾಶೆಗೊಳಿಸಿದ್ದೇವೆ’ ಎಂದು ತಿಳಿಸಿದರು.

ಇಮ್ರಾನ್ ಖಾನ್ ಜೊತೆಗೆ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಕೂಡ ಕಾಶ್ಮೀರದ ಬಗ್ಗೆ ಒಐಸಿ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದಾರೆ.

ಆರ್ಥಿಕ ದಿವಾಳಿ;1ಕೆಜಿ ಅಕ್ಕಿ ಬೆಲೆ 300 ರೂ.ಲಂಕಾದಿಂದ ಭಾರತಕ್ಕೆ ವಲಸೆ ಬಂದವರು ಹೇಳಿದ್ದೇನು?

ಮುಸ್ಲಿಂ ರಾಷ್ಟ್ರಗಳು ತಮ್ಮತಮ್ಮಲ್ಲೇ ಹಂಚಿ ಹೋಗಿರುವುದರಿಂದ ಪಾಶ್ಚಿಮಾತ್ಯ ದೇಶಗಳು ಒಐಸಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾವು ಮುಸ್ಲಿಮರು 1.5 ಶತಕೋಟಿ ಜನರು ಮತ್ತು ಈ ಘೋರ ಅನ್ಯಾಯವನ್ನು ತಡೆಯಲು ನಮ್ಮ ಧ್ವನಿ ಸಾಕಾಗುವುದಿಲ್ಲ. ನಾವು ಯಾವುದೇ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿಲ್ಲ. ನಾವು ಕಾಶ್ಮೀರದ ಜನರು ಮತ್ತು ಅವರ ಮಾನವ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಕಾನೂನು ಪ್ಯಾಲೆಸ್ತೀನ್ ಮತ್ತು ಕಾಶ್ಮೀರಿಗಳ ಪರವಾಗಿದೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್ ಕಾಶ್ಮೀರಿ ಹಾಗೂ ಪ್ಯಾಲೆಸ್ತೇನಿಗಳ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಅಂತರಾಷ್ಟ್ರೀಯ ಸಮುದಾಯವು ಕಾಶ್ಮೀರದ ಜನರಿಗೆ ತಮ್ಮ ಭವಿಷ್ಯವನ್ನು ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ನಿರ್ಧರಿಸುವ ಹಕ್ಕನ್ನು ನೀಡಲಾಗುವುದು ಎಂದು ಭರವಸೆ ನೀಡಿತ್ತು.

ಭಾರತೀಯ ಸೇನೆಗೆ ಆನೆ ಬಲ : ಸಂವಹನ ಸಾಮರ್ಥ್ಯ ಹೆಚ್ಚಿಸುವ ʼಜಿಸ್ಯಾಟ್-7ಬಿ ಉಪಗ್ರಹʼ ಸೇರ್ಪಡೆ 

ಆದರೆ ಆ ಹಕ್ಕನ್ನು ಕಾಶ್ಮೀರಿಗಳಿಗೆ ಎಂದಿಗೂ ನೀಡಲಾಗಿಲ್ಲ. ಕಾಶ್ಮೀರಿಗಳ ವಿಶೇಷ ಸ್ಥಾನಮಾನವನ್ನೂ ಅಕ್ರಮವಾಗಿ ಕಸಿದುಕೊಳ್ಳಲಾಗಿದೆ. ಮುಸ್ಲಿಮರ ದಬ್ಬಾಳಿಕೆ ವಿರುದ್ಧ ನಾವು ಒಂದಾಗದ ಹೊರತು ಇದೆಲ್ಲ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link