ಸಿಬಿಐಗೆ ಐವರು ಡಿಐಜಿಗಳ ನೇಮಕ…..!

 ನವದೆಹಲಿ: 

    ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ಆಗಿ ಕಾರ್ಯನಿರ್ವಹಿಸುತ್ತಿರುವ ಐವರು ಐಪಿಎಸ್ ಅಧಿಕಾರಿಗಳನ್ನು ಸೋಮವಾರ ಜಂಟಿ ನಿರ್ದೇಶಕರಾಗಿ ನೇಮಕ ಮಾಡಿ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

    ಮಹಾರಾಷ್ಟ್ರ ಕೇಡರ್‌ನ 2005 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಪ್ರಸ್ತುತ DIG ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್ ವೀರೇಶ್ ಪ್ರಭು ಅವರನ್ನು ಸಿಬಿಐ ಜಂಟಿ ನಿರ್ದೇಶಕರಾಗಿ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ(ACC) ಅನುಮೋದನೆ ನೀಡಿದೆ.

   ವೀರೇಶ್ ಪ್ರಭು ಅವರ ಬ್ಯಾಚ್‌ಮೇಟ್ ರಾಜೀವ್ ರಂಜನ್(ಸಿಕ್ಕಿಂ ಕೇಡರ್) ಅವರನ್ನು ಮೇ 30, 2026 ರವರೆಗಿನ ಅವಧಿಗೆ ಪ್ರಧಾನ ತನಿಖಾ ಸಂಸ್ಥೆಯಲ್ಲಿ ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    2005 ರ ಬ್ಯಾಚ್‌ನ ಇತರ ಮೂವರು ಐಪಿಎಸ್ ಅಧಿಕಾರಿಗಳಾದ ಸುಮೇಧಾ ದ್ವೆವೇದಿ(ಹಿಮಾಚಲ ಪ್ರದೇಶ ಕೇಡರ್), ವಿಜಯೇಂದ್ರ ಬಿದರಿ(ತಮಿಳುನಾಡು ಕೇಡರ್) ಮತ್ತು ಶಾರದ ರಾವುತ್(ಮಹಾರಾಷ್ಟ್ರ ಕೇಡರ್) ಅವರನ್ನೂ ಸಿಬಿಐ ಜಂಟಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap