5ಜಿ ತರಂಗಾಂತರ ಹರಾಜು : 11,300 ಕೋಟಿ ಮೊತ್ತದೊಂದಿಗೆ ಹರಾಜು ಮುಕ್ತಾಯ

ಮುಂಬೈ:

    ಮೊಬೈಲ್ ರೇಡಿಯೊವೇವ್ ಸೇವೆಗಳಿಗಾಗಿ 5ಜಿ ತರಂಗಾಂತರ (ಸ್ಪೆಕ್ಟ್ರಮ್) ಹರಾಜು ಬುಧವಾರ ಟೆಲಿಕಾಂ ಸಂಸ್ಥೆಗಳಿಂದ ಅಂದಾಜು 11,300 ರೂ ಮೌಲ್ಯದ ಬಿಡ್‌ಗಳೊಂದಿಗೆ ಮುಕ್ತಾಯಗೊಂಡಿದೆ.

   ಎಂಟು ಬ್ಯಾಂಡ್‌ಗಳನ್ನು ಒಳಗೊಂಡ 5ಜಿ ಏರ್‌ವೇವ್‌ಗಳಿಗಾಗಿ 96,000 ಕೋಟಿ ರೂಪಾಯಿಗಳ ಸ್ಪೆಕ್ಟ್ರಮ್ ಹರಾಜು ಮಂಗಳವಾರ ಪ್ರಾರಂಭವಾಗಿತ್ತು.800 ಮೆಗಾ ಹರ್ಟ್ಜ್​​ನಿಂದ 26 ಗಿಗಾ ಹರ್ಟ್ಜ್​​ವರೆಗಿನ ಆವರ್ತನಗಳನ್ನು ಒಳಗೊಂಡ ಒಟ್ಟು 10 ಗಿಗಾ ಹರ್ಟ್ಜ್​ ರೇಡಿಯೋ ತರಂಗಗಳು ಖರೀದಿಗೆ ಲಭ್ಯವಿದ್ದವು.

    ಏಳು ಸುತ್ತುಗಳಲ್ಲಿ ಮುಕ್ತಾಯಗೊಂಡ 96,000 ಕೋಟಿ ರೂ.ಗಳ 5ಜಿ ತರಂಗಾಂತರ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್ ಅತಿ ದೊಡ್ಡ ಬಿಡ್ಡರ್ ಆಗಿ ಹೊರಹೊಮ್ಮಿದೆ. ಭಾರ್ತಿ ಏರ್‌ಟೆಲ್ 900 ಮೆಗಾ ಹರ್ಟ್ಜ್​​, 1800 ಮೆಗಾ ಹರ್ಟ್ಜ್​​ ಮತ್ತು 2100 ಮೆಗಾ ಹರ್ಟ್ಜ್​​ ಬ್ಯಾಂಡ್‌ಗಳಲ್ಲಿ ಏರ್‌ವೇವ್‌ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.

    ರಿಲಯನ್ಸ್ ಜಿಯೋ ಹರಾಜಿನಲ್ಲಿ ಭಾಗವಹಿಸುವಿಕೆಯು ಸೀಮಿತವಾಗಿತ್ತು, ಮಾರುಕಟ್ಟೆಯ ನಾಯಕನಾಗಿರುವ ಜಿಯೋ, 1800 ಮೆಗಾ ಹರ್ಟ್ಜ್​​ ಬ್ಯಾಂಡ್‌ನಲ್ಲಿ 5ಜಿ ಬ್ಯಾಂಡ್‌ವಿಡ್ತ್ ಖರೀದಿಸಿರಬಹುದಾಗಿದೆ.

    ವೋಡಾಫೋನ್​ ಐಡಿಯಾ (ವಿಐ) 900 ಮೆಗಾ ಹರ್ಟ್ಜ್​​, 1800 ಮೆಗಾ ಹರ್ಟ್ಜ್​​ ಮತ್ತು 2500 ಮೆಗಾ ಹರ್ಟ್ಜ್​​ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

    ಏರ್‌ಟೆಲ್ ಮತ್ತು ವಿಐ ಈ ಮೊದಲೇ ಅಂದಾಜಿಸಿದ ರೀತಿಯಲ್ಲಿ ವರ್ತಿಸಿವೆ. ಈ ವರ್ಷ ತಮ್ಮ ಪರವಾನಗಿಗಳು ಮುಕ್ತಾಯಗೊಳ್ಳುವ ಪ್ರದೇಶಗಳಲ್ಲಿ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿವೆ. ಅಲ್ಲದೆ, ಸುನೀಲ್​ ಮಿತ್ತಲ್ ನೇತೃತ್ವದ ಏರ್‌ಟೆಲ್ ತನ್ನ ಸಬ್​-ಗಿಗಾ ಹರ್ಟ್ಜ್​ ಸ್ಪೆಕ್ಟ್ರಮ್ ಅನ್ನು ಬಲಪಡಿಸಲು 900 ಮೆಗಾ ಹರ್ಟ್ಜ್​​ ಏರ್‌ವೇವ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ.

   ಏರ್‌ಟೆಲ್ ತನ್ನ ಮಿಡ್-ಬ್ಯಾಂಡ್ ಸ್ಪೆಕ್ಟ್ರಮ್ ಹಿಡುವಳಿಗಳನ್ನು ವರ್ಧಿಸಲು ಪ್ರಮುಖ ಮಾರುಕಟ್ಟೆಗಳಲ್ಲಿ 2100 ಮೆಗಾ ಹರ್ಟ್ಜ್​​ ಏರ್‌ವೇವ್‌ಗಳನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಕ್ರಮವು ತನ್ನ 5ಜಿ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅದರ 4ಜಿ ನೆಟ್‌ವರ್ಕ್‌ಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

   ಜಿಯೋ ತನ್ನ 4ಜಿ ಮತ್ತು 5ಜಿ ಕವರೇಜ್ ಅನ್ನು ಬೆಂಬಲಿಸಲು 1800 ಮೆಗಾ ಹರ್ಟ್ಜ್​​ ಬ್ಯಾಂಡ್‌ನಲ್ಲಿ ತನ್ನ ಮಿಡ್-ಬ್ಯಾಂಡ್ 5ಜಿ ಏರ್‌ವೇವ್‌ಗಳನ್ನು ಹೆಚ್ಚಿಸಲು ಗಮನಹರಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

   ಈ ವರ್ಷ, ಸರ್ಕಾರವು 10.5 ಮೆಗಾ ಹರ್ಟ್ಜ್​​ 5ಜಿ ಏರ್‌ವೇವ್‌ಗಳನ್ನು ನೀಡಿದೆ. ಇದರ ಮೀಸಲು ಬೆಲೆ 96,238.45 ಕೋಟಿ ರೂ. ಇದೆ. 140-150 ಮೆಗಾ ಹರ್ಟ್ಜ್​​ ಮಾತ್ರ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.

    ಜುಲೈ 2022 ರ 5G ಹರಾಜಿನಲ್ಲಿ ಸಂಗ್ರಹಿಸಿದ ದಾಖಲೆಯ 1,50,173 ಕೋಟಿ ರೂ.ಗಿಂತ ಕಡಿಮೆ ಮತ್ತು ಮಾರ್ಚ್ 2021 ರ 4ಜಿ ಹರಾಜಿನಲ್ಲಿ ಸಂಗ್ರಹಿಸಲಾದ 77,814 ಕೋಟಿ ರೂ.ಗಿಂತಲೂ ಕಡಿಮೆ ಆದಾಯವು ಪ್ರಸ್ತುತ ಹರಾಜಿನಲ್ಲಿ ಸರ್ಕಾರಕ್ಕೆ ಸಂಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap