ನವದೆಹಲಿ:
ಸಂಸತ್ತು ಕಲಾಪ 5ನೇ ದಿನವೂ ಕಲಾಪದಲ್ಲಿ ಯಾವುದೇ ಫಲಪ್ರದ ಮಾತುಕತೆ, ಚರ್ಚೆಗಳು ನಡೆಯದೆ ವ್ಯರ್ಥವಾಗಿ ಮುಂದೂಡಲಾಗಿದೆ.
ಬಿಜೆಪಿ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಲು ಸದನದಲ್ಲಿ ಸಮಯಾವಕಾಶ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ನಿನ್ನೆ ಮನವಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ಯತ್ನಿಸಿದರಾದರೂ ಅವಕಾಶ ಸಿಗದ ಕಾರಣ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಆಡಳಿತ ಪಕ್ಷದ ಸದಸ್ಯರೂ ಪ್ರತಿಭಟನೆಗೆ ನಿಂತರು.
ಖರ್ಗೆ ಅವರು ಪ್ರಸ್ತಾಪಿಸಿದ ಆದೇಶವನ್ನು ಕೈಗೆತ್ತಿಕೊಂಡ ಸಭಾಪತಿಗಳು, ಮಾರ್ಚ್ 13 ಮತ್ತು 14 ರಂದು ಅವರು ಮಾಡಿದ ಪ್ರತಿಪಾದನೆಗಳನ್ನು ದೃಢೀಕರಿಸುವಂತೆ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಸೂಚಿಸಿದರು.
“ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿದ ಆದೇಶಕ್ಕೆ ಸಂಬಂಧಿಸಿದಂತೆ, ದಿನದ ಅವಧಿಯಲ್ಲಿ ಈ ವಿಷಯದ ಕುರಿತು ಮಾರ್ಚ್ 13 ಮತ್ತು 14 ರಂದು ಅವರು ಮಾಡಿದ ಸಮರ್ಥನೆಗಳನ್ನು ದೃಢೀಕರಿಸಲು ಸದನದ ನಾಯಕನಿಗೆ ನಿರ್ದೇಶಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ” ಎಂದು ಸಭಾಪತಿ ಧನ್ ಕರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
