ಆಫ್ಘನಿಸ್ತಾನ : ಬೆಳ್ಳಂಬೆಳಗ್ಗೆ 6.1ತೀವ್ರತೆಯ ಪ್ರಬಲ ಭೂಕಂಪ

ನವದೆಹಲಿ :

      ಸರಣಿ ಭೂಕಂಪಗಳಿಂದ ಜರ್ಜರಿತವಾಗಿರುವ ಆಫ್ಘನಿಸ್ತಾನದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ, ಇಂದು ಬೆಳ್ಳಂಬೆಳಗ್ಗೆ 6.1ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿದ್ದು, ಪ್ರಾಣಹಾನಿ ಬಗ್ಗೆ ಪ್ರಸ್ತುತ ಯಾವುದೇ ವರದಿಗಳಿಲ್ಲ.

     ಇಂದು ಬೆಳಗ್ಗೆ 06:11ಕ್ಕೆ ಹೆರಾತ್ ರಾಜಧಾನಿಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

    ಹೊಸದಾಗಿ ಸಂಭವಿಸಿದ ಭೂಕಂಪನದಿಂದಾಗಿ 465 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 135ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಸರಣಿ ಭೂಕಂಪಗಳಿಂದ ದೂರವಾಣಿ, ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ರಕ್ಷಣಾ ಕಾರ್ಯದಲ್ಲಿ ಅಡಚಣೆಯುಂಟಾಗಿದೆ. ಸರಣಿ ಭೂಕಂಪಗಳಲ್ಲಿ ಸತ್ತವರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ. ಇನ್ನೂ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಅವಶೇಷಗಳಡಿ ಮೃತದೇಹಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap