ತಿಪಟೂರು :
ಕುಟುಂಬ ಹಾಗೂ ಮಕ್ಕಳ ದೃಷ್ಠಿಯಲ್ಲಿಟ್ಟುಕೊಂಡು ಒಂದಾಗಿ ಬಾಳುವುದು ಒಳ್ಳೆಯದು ಇದು ನಿಮ್ಮ ಕುಟುಂಬ ಹಾಗೂ ಮಕ್ಕಳಿಗೂ ಒಂದು ಸಂಸ್ಕಾರವನ್ನು ಕಲಿಸಿದಂತೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ತಿಳಿಸಿದರು.
ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಇಂದು ಮತ್ತೆ ಒಂದಾದ 6 ಜೋಗಿಗಳಿಗೂ ಕಿವಿಮಾತನ್ನು ಹೇಳಿದ ಅವರು ವ್ಯಾದಿಗಳನ್ನು ಗುಟ್ಟಾಗಿಟ್ಟುಕೊಳ್ಳಬಾರದು ಆದರೆ ಸಂಸಾರದ ಗುಟ್ಟನ್ನು ಬಿಡಬಾರದು ಎಂಬ ಗಾದಯಂತೆ ಸಂಸಾರ ಎನ್ನುವುದು ನಾಲ್ಕು ಗೋಡೆಗಳ ಮದ್ಯೆಯೇ ಇರಬೇಕು, ಮಕ್ಕಳಿಗೆ ನಮ್ಮ ಸಂಸ್ಕಾರವನ್ನು ಹೆಚ್ಚಿಸಬಹುದು ಇನ್ನು ಮೂಮದೆ ಯಾವುದೆ ಗೊಡವೆಗಳಿಗೂ ಹೋಗದೆ ಸಂಸರಾವೆಂಬ ಸಾಗರವನ್ನು ಜೊತೆಯಾಗಿ ಈಜಿ ಎಂದು ಮತ್ತೆ ಒಂದಾದ ಜೋಡಿಗಳಿಗೆ ಕಿವಿಮಾತನ್ನು ಹೇಳಿದರು.
ಲೋಕ್ ಅದಾಲತ್ ಮೂಲಕ ಹೆಚ್ಚು ಪ್ರಕರಣಗಳನ್ನು ಯಾವುದೇ ಕೋರ್ಟ್ ಶುಲ್ಕವಿಲ್ಲದೇ ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳುವ ವೇದಿಕೆ ಇದಾಗಿದ್ದು, ಬ್ಯಾಂಕ್ ಪ್ರಕರಣಗಳು, ಚೆಕ್ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಇನ್ಶೂರೆನ್ಸ್ ಸಂಬಂಧಿತ ಪ್ರಕರಣಗಳು ಎಂವಿಸಿ ಹಾಗೂ ಇತರೆ ಪ್ರಕರಣಗಳನ್ನು ಸೇರಿದಂತೆ ಇಂದು 7621 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಡಿದ್ದಾರೆ. ಇಂದು ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಒಟ್ಟು 3,62,12,444.00 ರೂ ಸಂಗ್ರಹವಾಗಿದ್ದು ಹಣವನ್ನು ಸರ್ಕಾರಕ್ಕೆ ಜಮಾ ಮಾಡಲಾಯಿತು ಎಂದು ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರಾದ ಚಂದನ್.ಎಸ್ ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರುಗಳಾದ ಕೆ.ಎಸ್.ರಾಮಸ್ವಾಮಿ ಅಯ್ಯಂಗಾರ್, ಎಸ್.ಸೋಮಸುಂದರ್, ಟಿ.ಕೆ.ಉದಯಕುಮಾರ್, ಎಂ.ಸಿ.ನಟರಾಜು, ಕೆ.ಎಸ್.ಶ್ರೀಧರ್, ರಘು, ಹೆಚ್.ಎನ್.ಹರೀಶ್, ಟಿ.ಎನ್.ನಾಗಭೂಷಣ್, ಬಿ.ಮಲ್ಲಿಕಾರ್ಜುನಯ್ಯ, ಭರತ್‍ರಾಜ್, ಸಿ.ವೇಣು, ಹೆಚ್.ಎಲ್.ಸುಧಾಕರ್, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ