ಬೆಂಗಳೂರು :
ಈಗಾಗಲೇ ರಾಜ್ಯದಲ್ಲಿ ಶಾಲಾ-ಕಾಜೇಜು ವಿದ್ಯಾರ್ಥಿಗಳಿಗೆ ದಸರಾ ಹಾಗೂ ದೀಪಾವಳಿ ರಜೆಯಂತೂ ಸಿಕ್ಕಿದೆ. ಇದೀಗ ಮತ್ತೆ 6 ದಿನಗಳ ಕಾಲ ರಜೆಯನ್ನು ನೀಡಲಾಗಿದೆ. ಹಾಗಾದರೆ ಎಲ್ಲಿಂದ ಎಲ್ಲಿಯವರೆಗೂ ಹಾಗೂ ಕಾರಣ ವಿಶೇಷ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ದಸರಾ ರಜೆಯನ್ನು ಮುಗಿಸಿ, ಜೊತೆಗೆ ದೀಪಾವಳಿ ರಜೆಯನ್ನು ಕೂಡ ಸಂಭ್ರಮಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 6 ದಿನಗಳ ಕಾಲ ರಜೆ ಇರಲಿದ್ದು, ಇದರಿಂದ ಅವರಿಗೆ ಮತ್ತೆ ರಜೆಯ ರಸದೌತಣ ಸಿಕ್ಕಂತಾಗಿದೆ.
ದಸರಾ ರಜೆ ಎಂದು ಅಕ್ಟೋಬರ್‌ನಲ್ಲಿ 20 ದಿನಗಳ ಕಾಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ದೀಪಾವಳಿ ಹಬ್ಬದ ರಜೆ ಮುಗಿಸಿ ವಿದ್ಯಾರ್ಥಿಗಳು ಮತ್ತೆ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಇದೇ ನವೆಂಬರ್ 13ರಿಂದ ಸಾಲು ರಜೆಗಳು ಸಿಗಲಿವೆ.
ನವೆಂಬರ್ 13ರಿಂದ 18ರ ವರೆಗೆ ಒಟ್ಟು 6 ದಿನಗಳ ಕಾಲ ರಜೆ ಇರಲಿದೆ. ಈ ವರ್ಷದ ಕ್ಯಾಲೆಂಡರ್ ಪ್ರಕಾರ, ನವೆಂಬರ್ 13ರಂದು ತುಳಸಿ ಪೂಜೆ, ನವೆಂಬರ್ 14ರಂದು ಮಕ್ಕಳ ದಿನಾಚರಣೆ, ನವೆಂಬರ್ 15ರಂದು ಗುರುನಾನಕ್ ಜಯಂತಿ, ನವೆಂಬರ್ 16ರಂದು ಶನಿವಾರ ಕೇವಲ ಅರ್ಧ ದಿನ ಮಾತ್ರ ಶಾಲೆ, ಇನ್ನು ನವೆಂಬರ್ 17ರಂದು ರವಿವಾರ ಆದ್ದರಿಂದ ರಜೆ ಸಿಗಲಿದೆ.
ನವೆಂಬರ್ 18ರಂದು ಕನಕದಾಸ ಜಯಂತಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ರಾಜ್ಯದ ಹಲವು ಶಾಲೆಗಳಲ್ಲಿ ಈ ದಿನಂದು ರಜೆ ಇರಲಿದೆ. ಈ ಮೂಲಕ ಒಟ್ಟಾರೆಯಾಗಿ ನವೆಂಬರ್ 13ರಿಂದ ನವೆಂಬರ್ 18ರ ವರೆಗೆ ಒಟ್ಟು 6 ದಿನಗಳ ಕಾಲ ರಜೆ ಸಿಗಲಿದೆ. ಆದರೆ, ಈ ರಜೆ ನೀಡುವುದು ಶಿಕ್ಷಣ ಸಂಸ್ಥೆಗಳ ಪರಿಗಣನೆಗೆ ಬಿಟ್ಟಿದ್ದಾಗಿದೆ.