ತುಮಕೂರು:
ನಗರದ ವಾರ್ಡ್ ನಂ:21, ಕುವೆಂಪುನಗರ ಕಾಲೇಜು ಲಿಂಕ್ ರಸ್ತೆ 2ನೇ ಬ್ಲಾಕ್ ಮತ್ತು ಒಂದನೇ ಅಡ್ಡ ರಸ್ತೆ, 2ನೇ ಬ್ಲಾಕ್, ಶ್ರೀ ರಂಗ ಬಂಗಲೆಯ ಡಾ.ಪ್ರಸಾದ್ ಬಂಗಲೆಯ ಪೂರ್ವ, ಉತ್ತರ, ಪಶ್ಚಿಮ ದಿಕ್ಕುಗಳಿರುವ 6 ಮರಗಳು ಸುಮಾರು 35ರಿಂದ 40 ವರ್ಷದ ಹಳೆಯ ಮರಗಳನ್ನು ಕಡಿಸಲಾಗಿದೆ. ಮನೆಯ ಕಾಪೌಂಡಿನ ಒಳಗಡೆ ಇರುವ ಮರಗಳನ್ನು ಹೊರತು ಪಡಿಸಿ, ಹೊರಗಡೆ ಇರುವ ಪೆಲ್ಟೋ ಪೋರಂ 4 ಮತ್ತು ಅರಕೇರಿಯ 2 ಮರಗಳನ್ನು ತೆರವು ಗೊಳಿಸಿದ್ದಾರೆ.
ಒಂದು ಮನೆಗೆ 6 ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯವರಿಗೆ ಅಧಿಕಾರ ವಿದೆಯೆ? ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪತ್ರಗಳನ್ನು ಬರೆದರೂ ಕೂಡ ಯಾವ ಪ್ರಯೋಜನವೂ ಆಗಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ ಪವಿತ್ರ, ಸಹಾಯಕ ಅರಣ್ಯಾಧಿಕಾರಿ ರಾಘವೇಂದ್ರ, ಪ್ರಕಾಶ್, ಗೋವಿಂದರಾಜು ಈ ಅರಣ್ಯ ಇಲಾಖೆಯವರಿಗೆ ಕರೆ ಮಾಡಿದರೂ ಸರಿಯಾದ ಉತ್ತರ ಸಿಗುತ್ತಿಲ್ಲಾ, ಬೇಕ ಬಿಟ್ಟಿಯಾಗಿ ಉತ್ತರಿಸುತ್ತಿದ್ದಾರೆ.
ಜಲೀಲ್ ಎಂಬ ಕಂಟ್ರಾಕ್ಟರ್ ಗೆ ಮರ ಕಡಿಯಲು ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದಿನಕ್ಕೆ ಸುಮಾರು 10 ರಿಂದ 20 ಮರಗಳನ್ನು ಕಡಿಯಬಹುದು ಎಂದು ಅಂದಾಜಿಸಲಾಗಿದೆ. ಆತನನ್ನು ಪ್ರಶ್ನಿಸಿದರೆ ನಾವು ಮರ ಕಡಿಯಲು ಅನುಮತಿ ಮಡೆದುಕೊಂಡಿದ್ದೇವೆ ಎಂದು ಹೇಳುತ್ತಾನೆ. ಆದರ್ಶ ನಗರದ ಮೊದಲನೇ ಕ್ರಾಸ್‌ನಲ್ಲಿ ಕಾಡು ಇದ್ದು ಬಾದಾಮಿ ಮರಗಳನ್ನು ಅರ್ಧಕ್ಕೆ ಕಡಿದು ಸವಾಲು ಹಾಕುತ್ತಾರೆ. ನಾವು ಮರಗಳನ್ನು ಕಡಿಯುವುದನ್ನು ನಿಲ್ಲಿಸಲು ಶಕ್ತಿ ಇದೆಯಾ ಎಂದು ನಿವೃತ್ತ ಶಿಕ್ಷಕರಿಗೆ ಸವಾಲು ಹಾಕುತ್ತಿದ್ದಾರೆ.
ತುಮಕೂರಿನ ಅರಣ್ಯ ಇಲಾಖೆ ಮತ್ತು ಮರಗಳನ್ನು ಕಡಿಸುವ ಕಂಟ್ರಾಕ್ಟರ್ ಮಧ್ಯೆ ಒಪ್ಪಂದವಿದೆಯಾ ಎಂಬುದು ಪ್ರಶ್ನೆಯಾಗಿದೆ? ರಾಜಾರೋಷವಾಗಿ ಹಗಲು ದರೋಡೆ ಮಾಡುತ್ತಿರುವವರನ್ನು ಸಾರ್ವಜನಿ ಕರು ಕಣ್ಣಾರೆ ಕಂಡು ಮೂಕ ಪ್ರೇಕ್ಷಕರಂತಿದ್ದಾರೆ. ಕಾನೂನು ಸುವ್ಯವಸ್ಥೆ ನಗರದಲ್ಲಿ ಹಾಳಾಗಿ ಹೋಗಿದೆ ಎಂದು ವೃಕ್ಷ ಮಿತ್ರ ಅಧ್ಯಕ್ಷ ಪ್ರೊ.ಕೆ. ಸಿದ್ದಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ತುಮಕೂರಿನಾದ್ಯಂತ ಇರುವ ಸಂಘ ಸಂಸ್ಥೆಗಳು ಇವೆ, ಈ ಅಮಾನವೀಯ ಮರಗಳ ಕಗ್ಗೊಲೆಯನ್ನು ನಿಲ್ಲಿಸಲು ಧ್ವನಿ ಎತ್ತಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ