ಬೆಂಗಳೂರು
ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಲ್ಲೇ ಇಲ್ಲ. ದಿನೇ ದಿನೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೆಲ ನಗರಗಳಲ್ಲಿ ಒಟ್ಟು 6.05 ಸೆಂಟಿ ಮೀಟರ್‌ನಷ್ಟು ಸುರಿದಿದೆ. ಮುಂದಿನ ಮೂರು ದಿನ ಹೀಗೆ ಮಳೆ ಮುಂದುವರಿಯಲಿದೆ.
ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ವರದಿ ಪ್ರಕಾರ, ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೂ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗಿದೆ. ಇಂದು ಸಹ ಕೆಲವು ರಸ್ತೆಗಳಲ್ಲಿ ನೀರು ನಿಂತ ದೃಶ್ಯ ಕಂಡು ಬಂದಿದೆ. ಯಶವಂತಪುರದಲ್ಲಿ 60.5 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಸಿಂಗಸಂದ್ರ 54 ಮಿ.ಮೀ., ಎಚ್‌ಎಎಲ್ ಏರ್‌ಪೋರ್ಟ್ 46.5 ಮಿ.ಮೀ., ಯಲಹಂಕ KSNDMC ಕ್ಯಾಂಪಸ್ ಬಳಿ 46 ಮಿ.ಮೀ., ಜಕ್ಕೂರು4 1.5 ಮಿ.ಮೀ., ಬೆಳ್ಳಂದೂರು 35 ಮಿ.ಮೀ., ಕೊಡಿಗೇಹಳ್ಳಿ 30 ಮಿ.ಮೀ., ಅಟ್ಟೂರು 29.5 ಮಿ.ಮೀ., ಚೌಡೇಶ್ವರಿ ವಾರ್ಡ್ 27.5 ಮಿ.ಮೀ., ಹೊರಮಾವು 25.5 ಮಿ.ಮೀ., ಗರುಡಾಚಾರ್ ಪಾಳ್ಯ 25.5 ಮಿ.ಮೀಟರ್ ನಷ್ಟು ಮಳೆ ದಾಖಲಾಗಿದೆ.
ಗುರುವಾರ ಬೆಳಗ್ಗೆಯ ಸಹ ಕೆಲವೆಡೆ ಸೋನೆ ಮಳೆ ಕಂಡು ಬಂದಿದೆ. ನಗರದೆಲ್ಲಡೆ ತಂಪು ವಾತಾವರಣ ನಿರ್ಮಾಣವಾಗಿದ್ದು, ಇಂದು ಸಹ ಮಧ್ಯಾಹ್ನದ ನಂತರ ಮಳೆಯ ದರ್ಶನವಾಗಲಿದೆ ಎಂದು ಅಂದಾಜಿಸಲಾಗಿದೆ. ಅಧಿಕ ಚಳಿ ಸೃಷ್ಟಿಯಾಗಲಿದೆ. ಇಂದು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಗರಿಷ್ಠ – ಕನಿಷ್ಠ ತಾಪಮಾನದಲ್ಲಿ ತುಸು ಇಳಿಕೆಯಾಗುವ ಸಂಭವವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/05/kbec27rain.jpg)