ನರಗುಂದ:
ರಾಮಮಂದಿರದ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಗೆ 60 ದಿನಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ನರಗುಂದದ ಸಿಜೆ ಮತ್ತು ಜೆಎಂಎಫ್ ಸಿ ಕೋರ್ಟ್, ಅಯೋಧ್ಯೆಯ ರಾಮಮಂದಿರದ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಂತ ವ್ಯಕ್ತಿಗೆ 60 ದಿನಗಳ ಜೈಲು ವಾಸ ಹಾಗೂ 5000 ದಂಡವನ್ನು ವಿಧಿಸಿದೆ.
ನರಗುಂದದ ನಿವಾಸಿ ಅಕ್ಬರಸಾಬ ಖಾನ್ ಎಂಬವರು ಅ.24, 2014ರಂದು ರಾಮಮಂದಿರ ಚಿತ್ರದ ಮೇಲೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಅಕ್ಷೇಪಾರ್ಹ ಸಾಲುಗಳ್ನು ಬರೆದು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ವಿವಾದ ಆಲಿಸಿದಂತ ನ್ಯಾಯಧೀಶರು ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.