ಚಿನ್ನೇನಹಳ್ಳಿ ಗ್ರಾಮದೇವತೆ ಜಾತ್ರೆ : ಕಲುಷಿತ ನೀರು ಸೇವಿಸಿ 60 ಜನ ಅಸ್ವಸ್ಥ….!

ಮಧುಗಿರಿ :

   ತಾಲ್ಲೂಕಿನ ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಲಕ್ಷ್ಮಿದೇವಿ ಹಾಗೂ ಕೆಂಪಮ್ಮ ದೇವಿಯ ಐದು ದಿನಗಳ ಕಾಲ ಜಾತ್ರ ಮಹೋತ್ಸವ. ಸೋಮವಾರದಿಂದ ಪ್ರಾರಂಭವಾಗಿದ್ದು ಕಲುಷಿತ ನೀರು ಕುಡಿದು ಕಳೆದ ಎರಡು ದಿನಗಳಿಂದ 60 ಕ್ಕೂ ಹೆಚ್ಚು ಜನ
ಗ್ರಾಮಸ್ಥರು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿತ್ತು ಆದರೆ ಗ್ರಾಮದಲ್ಲಿನ ಕೊಳವೆ ಬಾವಿಯ ನೀರು ಸೇವಿಸಿ ಗ್ರಾಮದ ಜನರಿಗೆ ವಾಂತಿ ಭೇದಿ ಸುಸ್ತಿನಿಂದ ಬಳಲುತ್ತಿದ್ದು ಕೆಲವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರೆ ಮತ್ತೆ ಕೆಲವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆ ಯಿಂದ ನಿರ್ಗಮಿಸುತ್ತಿದ್ದಾರೆ.

    ಗ್ರಾಮದಲ್ಲಿ ಕೆಲವರು ಶುದ್ಧ ನೀರಿನ ಘಟಕದ ಹಾಗೂ ಟ್ಯಾಂಕ್ ನೀರನ್ನು ಕುಡಿಯಲು ಬಳಸುತ್ತಿದ್ದರೆಂದು ತಿಳಿದು ಬಂದಿದೆ.

    ಗ್ರಾಮದಲ್ಲಿನ ದೇವಿಯ ಆರಾಧನೆಯಲ್ಲಿ ಕೆಲ ಎಡವಟ್ಟು ಸಂಭಂವಿಸಿದೆ ಪೂಜಾ ಕೈಂಕರ್ಯಗಳು ಸರಿಯಾಗಿ ನಡೆಸಿಲ್ಲವಾದ್ದರಿಂದ ದೇವಿಯು ಮುನಿದು ಕೊಂಡಿದ್ದು ಈ ಗ್ರಾಮದಲ್ಲಿ ಈ ರೀತಿಯ ಸಾಂಕ್ರಮಿಕ ರೋಗ ರುಜನೆಗಳ ಘಟನೆಗಳು ಸಂಭಂವಿಸುತ್ತಿವೆ ಎಂದು ಕೆಲ ಹಿರಿಯ ಗ್ರಾಮಸ್ಥರು ನಂಬಿದ್ದಾರೆ‌.

    ಈಗಾಗಲೇ ಚಿನ್ನೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದ್ದು ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಕೊಳವೆ ಬಾವಿ ಹಾಗೂ ಶುದ್ಧ ನೀರಿನ ಘಟಕದ ನೀರನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದ್ದು ಸ್ಥಳದಲ್ಲಿ ಡಿಹೆಚ್ ಓ , ಉಪವಿಭಾಗಾಧಿಕಾರಿ , ಟಿ ಹೆಚ್ ಓ ಹಾಗೂ ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯ ಅಧಿಕಾರಿಗಳು ಬೀಡು ಬಿಟ್ಟಿದ್ದು ಗ್ರಾಮಸ್ಥರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

Recent Articles

spot_img

Related Stories

Share via
Copy link
Powered by Social Snap