ಬೆಂಗಳೂರು
ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಗೆ 7 ಸಾವಿರದ 904 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಶೇಕಡ 62 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕೇಶವ ಪ್ರಸಾದ್ ಎಸ್., ಕೆ.ಎ. ತಿಪ್ಪೇಸ್ವಾಮಿ, ಹಾಗೂ ಪ್ರಕಾಶ್ ಕೆ ರಾಥೋಡ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಷ್ಟಿçÃಯ ಸರಾಸರಿಗಿಂತ ಹೆಚ್ಚಿದೆ . ಬಹುಗ್ರಾಮ ನೀರು ಪೂರೈಕೆ ಯೋಜನೆಯಡಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕಾರ್ಯಾತ್ಮಕ ಕೋಲಾಯಿ ಮೂಲಕ ನೀರು ಸಂಪರ್ಕವನ್ನು ಒದಗಿಸಲು ಉದ್ದೇಶಿಸಲಾಗಿದೆ ಹಾಗೂ ಸದರಿ ಯೋಜನೆಯ ಕಾರ್ಯಕಾರಿ ಮಾರ್ಗಸೂಚಿಯನ್ನು ಡಿಸೆಂಬರ್ 2019ರಂದು ಹೊರಡಿಸಲಾಗಿದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳಿಗೆ 2024ರೊಳಗಾಗಿ ಸೇವಾ ಮಟ್ಟದಂತೆ ಸುಸ್ಥಿರ ಜಲ ಮೂಲಗಳಿಂದ ಶುದ್ದ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ರಾಜ್ಯದಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಾರಂಭವಾಗಿವೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಮಾರ್ಗಸೂಚಿಯನ್ವಯ ಬೃಹತ್ ನೀರು ಸರಬರಾಜಿನ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಶೇಕಡ 50% ರಷ್ಟು, ರಾಜ್ಯ ಸರ್ಕಾರದಿಂದ ಶೇಕಡ 50% ರಷ್ಟು ಅನುದಾನ ಹಂಚಿಕೆಯಾಗಿದ್ದು, ಸಮುದಾಯದಿಂದ ಯಾವುದೇ ವಂತಿಕೆ ಪಡೆಯುವುದಿಲ್ಲ. ಎಫ್.ಹೆಚ್.ಟಿ.ಸಿ (ಸಾಮಾನ್ಯ) ಕಾಮಗಾರಿಗಳಿಗೆ ಕೇಂದ್ರದ ಪಾಲು ಶೇಕಡ 45% ರಾಜ್ಯದ ಪಾಲು ಶೆಕಡ 45%, ಸಮುದಾಯದ ವಂತಿಗೆ ಶೇಕಡ 10% ಹಾಗೂ ಎಫ್.ಹೆಚ್.ಟಿ.ಸಿ (ಎಸ್.ಸಿ / ಎಸ್.ಟಿ) ಕಾಮಗಾರಿಗಳಿಗೆ ಕೇಂದ್ರದ ಪಾಲು ಶೇಕಡ 47.5% ರಾಜ್ಯದ ಪಾಲು ಶೆಕಡ 47.5% ಹಾಗೂ ಸಮುದಾಯದ ವಂತಿಗೆ ಶೇಕಡ 5% ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶೇಕಡ 62% ರಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ. ಬಹುಗ್ರಾಮಗಳ ಕುಡಿಯುವ ನೀರು ಪೂರೈಸಲು ಸಾಧ್ಯವಾದಷ್ಟು ತೆಗೆದುಕೊಳ್ಳಲಾಗಿದೆ, ಎಲ್ಲಿ ನೀರು ಇಲ್ಲವೋ ಅಂತಹ ಸ್ಥಳಗಳಲ್ಲಿ ಕೊಳವೆಭಾವಿಗಳನ್ನು ಕೊರೆಸಿ, ನೀರನ್ನು ಪರೀಕ್ಷೆ ಮಾಡಿ ಶುದ್ದಿಕರಿಸಿ ನೀರು ಒದಗಿಸಲಾಗುವುದು. ನಿಗದಿತ ಅವಧಿಯೊಳಗೆ ಗುರಿ ತಲುಪಿ ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳ ಜನರಿಗೆ ಸುರಕ್ಷಿತ ಹಾಗೂ ಶುದ್ದ ಕುಡಿಯುವ ನೀರಿನ್ನು ಪೂರೈಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ