ಸುರಪುರ ಉಪಚುನಾವಣೆ : ಶೇ.67ರಷ್ಟು ಮತದಾನ

ಯಾದಗಿರಿ:

   ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಕಲ್ಲು ತೂರಾಟ ಘಟನೆಯನ್ನು ಹೊರತುಪಡಿಸಿದರೆ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿ ನಡೆದಿದ್ದು, ರಾತ್ರಿ 8 ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ.67ರಷ್ಟು ಮತದಾನವಾಗಿದೆ.

  ಬಿಜೆಪಿಯಿಂದ ಮಾಜಿ ಸಚಿವ ರಾಜಾ ನರಸಿಂಹ ನಾಯಕ್ (ರಾಜುಗೌಡ) ಮತ್ತು ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ್ ನಾಯಕ್ ಸೇರಿದಂತೆ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

   ಈ ವರ್ಷದ ಜನವರಿಯಲ್ಲಿ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯ್ಕ್ ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ರಾಜಾ ವೆಂಕಟಪ್ಪ ಅವರ ಪುತ್ರ ರಾಜಾ ವೇಣುಗೋಪಾಲ್ ನಾಯಕ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

   ಸುರಪುರ ವಿಧಾನಸಭಾ ಕ್ಷೇತ್ರದ ಮತದಾರರು ಅದೇ ದಿನ ರಾಯಚೂರು ಕ್ಷೇತ್ರಕ್ಕೆ ತಮ್ಮ ಶಾಸಕ ಮತ್ತು ಸಂಸದರನ್ನು ಆಯ್ಕೆ ಮಾಡಲು ಮತ ಚಲಾಯಿಸಿದರು. ಎರಡೂ ಚುನಾವಣೆಗಳ ಇವಿಎಂಗಳನ್ನು ಒಂದೇ ವಿಭಾಗದಲ್ಲಿ ಇರಿಸಲಾಗಿತ್ತು.

   ಮತದಾರರು ಮತದಾನದ ವಿಭಾಗವನ್ನು ಪ್ರವೇಶಿಸಿದ ನಂತರ ಎರಡೂ ಇವಿಎಂಗಳ ಬಟನ್‌ಗಳನ್ನು ಒತ್ತುವಂತೆ ಸೂಚಿಸಲಾಗಿತ್ತು. ಇವಿಎಂಗಳನ್ನು ಒಂದೇ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸಿದ್ದರಿಂದ ಉಪ ಚುನಾವಣೆಯಲ್ಲಿ ಶಾಸಕರ ಆಯ್ಕೆಗಾಗಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಂಸದರ ಆಯ್ಕೆಗಾಗಿ ಮತದಾರರು ಏಕಕಾಲದಲ್ಲಿ ತಮ್ಮ ಮತ ಹಕ್ಕು ಚಲಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap