ಮಂಡ್ಯ
2019ರ ಲೋಕಸಭಾ ಚುನಾವಣೆಯ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ, ದಿವಂಗತ ನಟ ಅಂಬರೀಶ್ ಅವರ ಪತ್ನಿ, ಸುಮಲತಾ ಅಂಬರೀಶ್ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು.
ಈ ವೇಳೆ ಎದುರಾಳಿಯಾಗಿ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಇವರಿಬ್ಬರ ಪ್ರತಿಸ್ಪರ್ಧಿಯಾಗಿ ಸುಮಲತಾ ಎಂಬ ಹೆಸರಿನ ಇನ್ನಿಬ್ಬರು ಸ್ಪರ್ಧೆ ಮಾಡಿದ್ದರು.
ಇದೀಗ ಚುನಾವಣಾ ಆಯೋಗ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳಿಗಳನ್ನು ಅನರ್ಹಗೊಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಖರ್ಚು ವೆಚ್ಚದ ಬಗ್ಗೆ ಸರಿಯಾದ ದಾಖಲಾತಿ ಸಲ್ಲಿಸದ ಹಿನ್ನೆಲೆ ಇಬ್ಬರು ಸುಮಲತಾ ಸೇರಿದಂತೆ ಮಂಡ್ಯ ಜಿಲ್ಲೆಯ 7 ಅಭ್ಯರ್ಥಿಗಳನ್ನ ಡಿಸ್ಕ್ವಾಲಿಫೈ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಅನರ್ಹಗೊಂಡ 7 ಸ್ಪರ್ಧಿಗಳು
ಅರವಿಂದ ಪ್ರೇಮಾನಂದ, ಎನ್.ಸಿ ಪುಟ್ಟೆಗೌಡ, ಸುಮಲತಾ ಟಿ.ಎಮ್ ಹೊಸುರು, ಎಮ್. ಸುಮಲತಾ, ಎಸ್.ಹೆಚ್. ಲಿಂಗೇಗೌಡ್, ಕೆ.ಆರ್. ಶಿವಮಾದೇಗೌಡ, ಬಿಎಸ್ ಗೌಡ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ