ಚೆನ್ನೈ:


ಟಿವಿ ಆನ್ ಮಾಡು ಎಂದು ಹೇಳಿದ್ದಕ್ಕೆ ಯುವಕನೊಬ್ಬ 8 ವರ್ಷದ ಬಾಲಕಿಯನ್ನು ಕೊಂದಿದ್ದಾನೆ.
8 ವರ್ಷದ ಬಾಲಕಿಯನ್ನು ಪ್ಲಾಸ್ಟಿಕ್ ಡ್ರಮ್ಸ್ ನಲ್ಲಿ ಮುಳುಗಿಸಿ ಕೊಂದು ಒಂದು ಗಂಟೆಯ ನಂತರ ನದಿಗೆ ಶವವನ್ನು ಎಸೆದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿ ತೂತುಕುಡಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಮುತಾರ್ ಎಂದು ಗುರುತಿಸಲಾಗಿದೆ. ಈಕೆ ತನ್ನ ತಾಯಿ ಜೊತೆ ವಾಸಿಸುತ್ತಿದ್ದಳು. ತಾಯಿ ದಿನಗೂಲಿ ಮಾಡಿ ಮಗಳನ್ನು ಸಾಕುತ್ತಿದ್ದಳು.
ಘಟನೆಯ ವಿವರ :
ಬುಧವಾರ ಬೆಳಗ್ಗೆ ಸುಮಾರು 11.30 ವೇಳೆ ಬಾಲಕಿ ಆರೋಪಿ ಮನೆಗೆ ಟಿವಿ ನೋಡಲು ಹೋಗಿದ್ದಾಳೆ. ಈ ವೇಳೆ ಮುತೀಶ್ವರನ್ ಆತನ ಬುದ್ಧಿಮಾಂದ್ಯ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಅವನ ವಿರುದ್ಧ ಜಗಳ ಮಾಡಿದ್ದಾಳೆ ಜೊತೆಗೆ ಕಲ್ಲಿನಿಂದ ಹೊಡೆದಿದ್ದಾಳೆ. ಈ ವೇಳೆ ಟಿವಿ ಆನ್ ಮಾಡುವಂತೆ ಕೇಳಿದ್ದಾಳೆ. ಈ ವೇಳೆ ತಂದೆಯ ಮೇಲಿದ್ದ ಕೋಪವನ್ನು ಟಿವಿ ಆನ್ ಮಾಡಲು ತಿಳಿಸಿದ ಬಾಲಕಿ ಮೇಲೆ ಬಿಟ್ಟಿದ್ದಾನೆ. ಆಕೆಯನ್ನು ಕತ್ತು ಹಿಸುಕಿದ್ದಾನೆ. ಆಗ ಮುತಾರ್ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆಗ ಅವಳನ್ನು ಒಂದು ಪ್ಲಾಸ್ಟಿಕ್ ಡ್ರಮ್‍ನಲ್ಲಿ ತುಂಬಿ ಮುಚ್ಚಳ ಹಾಕಿದ್ದಾನೆ.
ಬಾಲಕಿಯನ್ನು ಸಾಯಿಸಿ ಅವಳನ್ನು ಡ್ರಮ್‍ಗೆ ತುಂಬಿದ ಮುತೀಶ್ವರನ್ ಒಂದು ಗಂಟೆಯ ನಂತರ ಅವನ ಸ್ನೇಹಿತ, ನಂದೀಶ್ವರನ್ ಬಳಿ ಹೋಗಿದ್ದಾನೆ. ನಮ್ಮ ಮನೆಯಲ್ಲಿ ಕಸ ತುಂಬಿದ ಡ್ರಮ್ ಇದೆ ಅದನ್ನು ಎಸೆದು ಬರಲು ನನಗೆ ನೀನು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ನಂದೀಶ್ವರ್ ಒಪ್ಪಿಕೊಂಡಿದ್ದಾನೆ ನಂತರ ಇಬ್ಬರು ಸೇರಿ ಬೈಕಿನಲ್ಲಿ ಒಂದೂವರೆ ಕಿ.ಮೀ ಡ್ರಮ್ ಅನ್ನು ಸಾಗಿಸಿದ್ದಾರೆ. ಅಲ್ಲಿ ಒಂದು ಸೇತುವೆ ಬಳಿ ಬೈಕ್ ನಿಲ್ಲಿಸಿ ಬಾಲಕಿಯ ಮೃತದೇಹವನ್ನು ಚಾನೆಲ್‍ಗೆ ಎಸೆದು ಬಂದಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಜನರು ಇದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದೀಗ ಆರೋಪಿ ಹಾಗೂ ಮೃತದೇಹವನ್ನು ಸಾಗಿಸಲು ಸಹಾಯ ಮಾಡಿದ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








