ನ್ಯೂಝಿಲೆಂಡ್ ತಂಡಕ್ಕೆ ಹೊಸ ನಾಯಕ: 8 ಆಟಗಾರರು ಹೊರಕ್ಕೆ..!

ನವದೆಹಲಿ :

    ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ನ್ಯೂಝಿಲೆಂಡ್ ತಂಡ ಮುಂಬರುವ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಕಿವೀಸ್ ಪಡೆಯನ್ನು ಮುನ್ನಡೆಸುತ್ತಿರುವುದು ಮೈಕೆಲ್ ಬ್ರೇಸ್​ವೆಲ್ ಎಂಬುದು ವಿಶೇಷ. ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಝಿಲೆಂಡ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಮಿಚೆಲ್ ಸ್ಯಾಂಟ್ನರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. 

    ಮಾರ್ಚ್ 16 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಸರಣಿಯಲ್ಲಿ ಒಟ್ಟು 5 ಟಿ20 ಪಂದ್ಯಗಳು ನಡೆಯಲಿದ್ದು, ಇದಕ್ಕಾಗಿ ಆಯ್ಕೆ ಮಾಡಲಾದ ತಂಡದಲ್ಲಿ 8 ಬದಲಾವಣೆ ಮಾಡಲಾಗಿದೆ.

   ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದ 8 ಆಟಗಾರರು ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಇಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ ಅಲ್ಲದೆ, ಟಾಮ್ ಲ್ಯಾಥಮ್, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೆವೊನ್ ಕಾನ್ವೆ, ವಿಲ್ ಯಂಗ್, ನಾಥನ್ ಸ್ಮಿತ್ ಮತ್ತು ಜಾಕೋಬ್ ಡಫಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

   ಚಾಂಪಿಯನ್ಸ್ ಟ್ರೋಫಿ ಆಡಿದ್ದ ಕೈಲ್ ಜೇಮಿಸನ್ ಮತ್ತು ವಿಲ್ ಒರೋಕ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಇಬ್ಬರೂ ಟಿ20 ಸರಣಿಯ ಮೊದಲ 3 ಪಂದ್ಯಗಳಿಗೆ ಮಾತ್ರ ಲಭ್ಯವಿರುತ್ತಾರೆ. ಹಾಗೆಯೇ ಭುಜದ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಿಂದ ಹೊರಗುಳಿದಿದ್ದ ಮ್ಯಾಟ್ ಹೆನ್ರಿ, ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದ್ದಾರೆ.

ಇನ್ನು ಈ ತಂಡದಲ್ಲಿ ಫಿನ್ ಅಲೆನ್, ಜಿಮ್ಮಿ ನೀಶಮ್ ಮತ್ತು ಟಿಮ್ ಸೀಫರ್ಟ್ ಕೂಡ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ, ಟಿಮ್ ರಾಬಿನ್ಸನ್ ಮತ್ತು ಜ್ಯಾಕ್ ಫಾಕ್ಸ್‌ಗೂ ಅವಕಾಶ ಸಿಕ್ಕಿದೆ. 

   ನ್ಯೂಝಿಲೆಂಡ್ ಟಿ20 ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್‌ಮನ್, ಜಾಕೋಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮಿಚ್ ಹೇ, ಮ್ಯಾಟ್ ಹೆನ್ರಿ , ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ವಿಲ್ ಒರೋಕ್, ಟಿಮ್ ರಾಬಿನ್ಸನ್, ಬೆನ್ ಸಿಯರ್ಸ್, ಟಿಮ್ ಸೀಫರ್ಟ್, ಇಶ್ ಸೋಧಿ.

Recent Articles

spot_img

Related Stories

Share via
Copy link