ಮಹಾರಾಷ್ಟ್ರ:
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಕಲುಷಿತ ನೀರು ಸೇವಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಸೋಮವಾರ ನಡೆದಿದೆ.ಘಟನೆ ನಡೆದ ಮುಗಾಂವ ತಾಂಡಾ ಗ್ರಾಮದಲ್ಲಿ 107 ಮನೆಗಳಿದ್ದು, 440 ಜನಸಂಖ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
93 ಜನರು ಕಿಬ್ಬೊಟ್ಟೆ ನೋವು ಮತ್ತು ಅತಿಸಾರ ಸಮಸ್ಯೆಯೊಂದಿಗೆ ಜೂನ್ 26 ಮತ್ತು 27 ರಂದು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾರೆಂದು ಜಿಲ್ಲಾ ಆರೋಗ್ಯ ಅಧಿಕಾರಿ ಬಾಲಾಜಿ ಶಿಂಧೆ ಮಾಹಿತಿ ನೀಡಿದ್ದಾರೆ. ಮುಗಾಂವ್ ತಾಂಡಾ ಗ್ರಾಮದಲ್ಲಿ 56 ರೋಗಿಗಳು ಚಿಕಿತ್ಸೆ ಪಡೆದರೆ, 37 ಮಂದಿಯನ್ನು ಪಕ್ಕದ ಮಂಜರಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ, ಚಿಕಿತ್ಸೆ ನಂತರ ಬಿಡುಗಡೆಗೊಂಡಿದ್ದಾರೆಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ