ಜಗಳೂರು:
ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮರಿಕಟ್ಟೆ ಗ್ರಾಮದ 300 ಕ್ಕೂ ಅಧಿಕ ಜಾಬ್ ಕಾರ್ಡ್ ಗಳನ್ನು ಪಿಡಿಓ ಡಿಲಿಟ್ ಮಾಡಿದ್ದು, ನಮಗೆ ಹೊಸಕಾರ್ಡ್‍ನ್ನು ನೀಡುತ್ತಿಲ್ಲ ಮತ್ತು ಕೂಲಿ ಕೆಲಸವನ್ನು ಸಹ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮರಿಕಟ್ಟೆ ಗ್ರಾಮಸ್ಥರಿಂದ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಧಿಡೀರ್ ಪ್ರತಿಭಟನೆ ನಡೆಸಿದರು .
ಈ ವೇಳೆ ಗ್ರಾಮದ ಮುಖಂಡ ಕೊಟ್ರೇಶ್ ಮಾತನಾಡಿ ತಾಲೂಕಿನ ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮರಿಕಟ್ಟೆ, ತುಂಬಿನಕಟ್ಟೆ, ಚಿಕ್ಕ ಉಜ್ಜಿನಿ ಗ್ರಾಮಗಳಲ್ಲಿರುವ ಆರ್ಹ ಫಲಾನುಭವಿಯ ಕಾರ್ಡ್‍ಗಳನ್ನು ಡಿಲಿಟ್ ಮಾಡಿ 6 ತಿಂಗಳು ಕಳೆದಿವೆ. ಇತ್ತ ಹೊಸ ಕಾರ್ಡ್‍ನ್ನು ನೀಡುತ್ತಿಲ.್ಲ ಕೂಲಿ ಕೆಲಸವನ್ನು ನೀಡುತ್ತಿಲ್ಲ . ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಪಿಡಿಓ ನಮಗೆ ದಬಾಯಿಸುತ್ತಾರೆ. ಕಂಪ್ಯೂಟರ್ ಅಪರೇಟರ್ ಮತ್ತು ಪಿಡಿಓ ಶಾಮಿಲಾಗಿ ನಮ್ಮ ಜಾಬ್ ಕಾರ್ಡ್ ನಂಬರ್‍ಗೆ ಬೇರೊಬ್ಬರ ನಕಲಿ ಬ್ಯಾಂಕ್ ಖಾತೆಯನ್ನು ಜಂಟಿ ಮಾಡಿ ಹಣ ಲಪಾಟಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ಹ ಕಾರ್ಡ್‍ದಾರರಿಗೆ ಕೂಲಿ ಕೆಲಸ ನೀಡದೇ ನಕಲಿ ಜಾಬ್ ಕಾಡ್ ಸೃಷ್ಟಿಸಿ ಪಿಡಿಓ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಗೌರಿಪುರ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಾಮಗಾರಿ ಮಾಡಿಸುತ್ತಿದ್ದಾರೆ. ಆರ್ಹತೆ ಇರುವಂತ 300 ಕ್ಕೂ ಅಧಿಕ ಜಾಬ್ ಕಾರ್ಡ್‍ಗಳನ್ನು ಡಿಲಿಟ್ ಮಾಡಿದ್ದಾರೆ ಕಾರಣ ಕೇಳಿದರೆ ನಮಗೆ ಆವಾಜ್ ಹಾಕುತ್ತಾರೆ ಎಂದು ದೂರಿದರು.
ಸತತ ನಾಲ್ಕು ವರ್ಷಗಳಿಂದ ಮಳೆ ಇಲ್ಲದೇ ಜನರು ಕಾಫಿ ಸಿಮೆ ಮತ್ತು ಮಲೆನಾಡು ಭಾಗದ ಕಡೆ ಗುಳೆ ಹೊಗುತ್ತಿದ್ದಾರೆ ದುಡಿಯುವ ಕೈಗಳಿಗೆ ಕೆಲಸ ನೀಡದೇ ಅಧಿಕಾರಿಗಳು ಕಾಮಗಾರಿಗಳಿಗೆ ಜೆಸಿಬಿಯನ್ನು ಬಳಸಿ ಆರ್ಹ ಕೂಲಿ ಕಾರ್ಮಿಕರಿಗೆ ಆನ್ಯಾಯ ಮಾಡುತ್ತಿದ್ದಾರೆ ಎಂದು ಬಸಮ್ಮ ಅಸಮಾದಾನ ವ್ಯಕ್ತಪಡಿಸುತ್ತಾರೆ.
ಈ ಸಂದರ್ಭದಲ್ಲಿ ದಾದಪಿರ್ , ಸುಜಾತ, ಮಾರಪ್ಪ, ಬಸಣ್ಣ, ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು .ಕಾರ್ಡ್‍ಗಳು ಡಿಲಿಟ್ ಆಗಿವೆ ಹೊಸ ಜಾಬ್ ಕಾರ್ಡ್‍ಗಳನ್ನು ಮಾಡಲು ಇಓ ರಿಂದ ಅನುಮತಿ ಪಡೆಯ ಬೇಕಾಗಿರುವುದರಿಂದ ಇಓ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಪಿಡಿಒ ಶಶಿಧರ್ ಗ್ರಾಮಸ್ಥರ ಆರೋಪಕ್ಕೆ ಸ್ಪಷ್ಟನೆ ನೀಡುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
