ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ:ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಚಿತ್ರದುರ್ಗ

     ಭೋವಿ ಸಮಾಜವು ಬೇರೆ ಸಮಾಜದ ಜೊತೆಯಲ್ಲಿ ಸಮಾನಾಗಿ ನಿಲ್ಲುವ ಕೆಲಸ ಮಾಡಿದ್ದೇನೆ. ಸಮಾಜ ಕಟ್ಟುವ ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಬಹಳಷ್ಟು ಜನ ಬೆಂಬಲಿಸಿದ್ದಾರೆ. ಮುದಿನ ದಿಂಗಳಲ್ಲಿಯೂ ಈ ಜನಾಂಗವನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಸಹಕರಿಸಬೇಕು ಎಂದು ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

     ನಗರದ ಹೊರ ಹೊಲಯದಲ್ಲಿನ ಭೋವಿ ಗುರು ಪೀಠದಲ್ಲಿ ಹಮ್ಮಿಕೊಂಡಿದ್ದ ಭೋವಿ ಜನೋತ್ಸವ ಹಾಗೂ ತಮ್ಮ 34ನೇ ವಸಂತೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಸ್ವಾಮೀಜಿ ಮಾತನಾಡಿದರು ಮಾನವ ಹುಟ್ಟಿನಿಂದ ಸಾಯುವರೆಗೂ ಅತ ಸುಮ್ಮನಿದ್ದರೂ ಸಹಾ ಸಮಯ ಮತ್ತು ವಯಸ್ಸು ಕಳೆಯುತ್ತಿದೆ ಇದು ಯಾರನ್ನು ಸಹಾ ಕೇಳುವುದಿಲ್ಲ, ಇದರ ಮಧ್ಯದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕಿದೆ, ಬೇರೆಯವರನ್ನು ಆದರ್ಶವಾಗಿ ಇಟ್ಟುಕೊಂಡು ಬರೀ ಅವರ ಅದರ್ಶವನ್ನು ಪಾಲಿಸಿದರೆ ಸಾಲದು. ಬೇರೆಯವರು ನಮ್ಮನ್ನು ನೋಡಿ ಮುನ್ನಡೆಯುವಂತಾಗಬೇಕು ಎಂದರು

     ನಾವುಗಳ ಅವರ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದಕ್ಕಿಂತ ಅವರು ನಮ್ಮ ಕಾಲಘಟ್ಟದಲ್ಲಿ ಇದ್ದರು ಎಂದು ಹೇಳುವಂತಾಗಬೇಕಿದೆ ಈ ರೀತಿಯ ಬದುಕನ್ನು ನಡೆಸಬೇಕಿದೆ, ಬೇರೆಯವರ ಯಶಸ್ವಿ ಪಥವನ್ನು ಹಿಂಬಾಲಿಸಬೇಕು ಆದರೆ ಅದು ಪೂರ್ಣ ಪ್ರಮಾಣದಲ್ಲಿ ಆಗದೇ ನಮ್ಮ ಪಥವನ್ನು ಸಹಾ ಪ್ರಾರಂಭ ಮಾಡಬೇಕಿದೆ ಎಂದು ಕರೆ ನೀಡಿದ ಶ್ರೀಗಳು, ನಾವು ಮಾಡುವ ಕೆಲಸಗಳು ಸಾಧ್ಯವಾದಷ್ಟು ಶಾಶ್ವತವಾಗಿ ಇರುವಂತೆ ಮಾಡಬೇಕಿದೆ ನಾವು ಹೋದರು ಸಹಾ ಸಮಾಜ ನಮ್ಮನ್ನು ನೆನೆಯುವ ಕಾರ್ಯವನ್ನು ಮಾಡಬೇಕಿದೆ ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.

         ವಿದ್ಯಾರ್ಥಿಗಳ ಜೀವನ ಸಾಧನೆಯ ಜೀವನವಾಗಬೇಕಿದೆ ನಿಮ್ಮಲ್ಲಿನ ಕ್ರೀಯಾಶೀಲತೆಯನ್ನು ಹೊರ ಹಾಕವ ಕಾರ್ಯವನ್ನು ಮಾಡುವುದರ ಮೂಲಕ ದೇಶಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕಿದೆ ಭಾರತ ಹೆಚ್ಚಿನ ಪ್ರಮಾಣದಲ್ಲಿ ಯುವ ಸಂಪತ್ತನ್ನು ಹೊಂದಿದ ದೇಶವಾಗಿದೆ, ಮುಂದೆ ಸಾಧನೆ ಮಾಡಬೇಕಾಗಿರುವುದನ್ನು ಈಗಿನಿಂದಲೆ ಮಾಡಿ ಇದರಿಂದ ದೇಶ ಮತ್ತು ನಿಮಗೂ ಕೀರ್ತಿ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಶ್ರೀಗಳು, ಕಲಿಯುವ ಸಮಯದಲ್ಲಿ ಬೇರೆ ಕಡೆಯಲ್ಲಿ ಮನಸ್ಸನ್ನು ಹರಿಯಲು ಬಿಡದೇ ಏಕಾಗ್ರತೆಯಿಂದ ಅಭ್ಯಾಸ ಮಾಡುವುದರ ಮೂಲಕ ತಂದೆ ತಾಯಿ, ಶಾಲೆಗೆ ಹೆಸರನ್ನು ತರುವಂತೆ ಸೂಚಿಸಿದರು.

       ನಾವು ಭೋವಿ ಸಮಾಜಕ್ಕೆ ಗುರುಗಳಾದಾಗಿನಿಂದ ಇಲ್ಲಿಯವರೆಗೂ ಸಮಾಜವನ್ನು ಕಟ್ಟುವ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯವನ್ನು ಮಾಡಲಾಗಿದೆ ಇದರಿಂದಲೇ ಈಗ ಭೊವಿ ಸಮಾಜ ಬೇರೆ ಸಮಾಜದ ಜೊತೆಯಲ್ಲಿ ಸರಿ ಸಮಾನವಾಗಿ ನಿಲ್ಲುವಂತ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಮಠದಿಂದ ರಾಜಕೀಯವನ್ನು ಪಡೆದಿದ್ದಾರೆ ಅವರು ಮಠವನ್ನು ಮರೆಯಬಾರದು ಕಷ್ಟ ಕಾಲದಲ್ಲಿ ಮಠ ನಿಮ್ಮ ಕೈ ಹಿಡಿದಿದೆ ನೀವುಗಳು ಮಠದ ಕೈಯನ್ನು ಹಿಡಿಯಬೇಕು ಎಂದು ಶ್ರೀಗಳು ಸೂಚಿಸಿದರು.

ತಂದೆ-ತಾಯಿ ನೆನಪಾಗಿಲ್ಲ :

       ನಾನು ಈ ಸಮಾಜದ ಗುರುವಾದಾಗಿನಿಂದ ಇಲ್ಲಿಯವರೆಗೂ ಸಹಾ ನನ್ನ ಪೂರ್ವಾಶ್ರಮದ ತಂದೆ-ತಾಯಿಗಳ ನೆನಪಾಗಿಲ್ಲ ಏಕೆಂದರೆ ನನ್ನ ಭಕ್ತಾಧಿಗಳು ಮತ್ತು ನನ್ನ ಸಮಕಾಲೀನ ಇತರೆ ಜನಾಂಗದ ಗುರುಗಳು ನನನ್ನು ಆ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಯಾವುದೇ ಸಮಸ್ಯೆ ಎದುರಾದರೆ ಎಲ್ಲರು ಸೇರಿ ನನಗೆ ಧೈರ್ಯ ತುಂಬಿದ್ದಾರೆ ಸಮಸ್ಯೆಯನ್ನು ಎದುರಿಸುವಲ್ಲಿ ನನಗೆ ಸಹಾಯ ಮಾಡಿದ್ದಾರೆ ಎಂದು ಶ್ರೀಗಳು ಹೇಳುವಾಗ ಅವರ ಕಣ್ಣುಗಳು ಒದ್ದೆಯಾದವು

      ನಾನು ಓಡಾಡಲು ಕಾರನ್ನು ಖರೀದಿ ಮಾಡಲು ಸಹಾ ಶಾಂತವೀರ ಶ್ರೀಗಳು ಸಹಾಯ ಮಾಡಿದ್ದಾರೆ, ಇದೆ ರೀತಿ ಕನಕಗುರು ಪೀಠದ ಶ್ರೀಗಳು ಸಹಾ ನನಗೆ ಹೊಸದುರ್ಗದಲ್ಲಿದ್ದಾಗ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಕಷ್ಟದ ಸಮಯದಲ್ಲಿ ಅಣ್ಣ ರೀತಿಯಲ್ಲಿ ನನಗೆ ಇತರೆ ಜನಾಂಗದ ಶ್ರೀಗಳು ಸಹಾಯ ಮಾಡಿದ್ದಾರೆ, ಇದನ್ನು ನನ್ನ ಜೀವನದಲ್ಲಿ ಮರೆಯುವ ಹಾಗಿಲ್ಲ ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಿಳಿಸಿದರು.

       ಕಾರ್ಯಕ್ರಮದಲ್ಲಿ ಶ್ರೀ ಶಾಂತವೀರ ಶ್ರೀಗಳು, ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿ ಶ್ರೀಗಳು, ಯಾದವನಂದ ಶ್ರೀಗಳು, ಹಡಪದ ಅಪ್ಪಣ್ಣ ಶ್ರೀಗಳು, ಬಸವಪಾದ ಶ್ರೀಗಳು, ಸಮಾಜದ ಮುಖಂಡರಾದ ರವಿ ಮಾಕುಳಿ, ಆನಂದಪ್ಪ, ಯಲ್ಲಪ್ಪ, ಗಂಗಾಧರ, ಜಗನ್ನಾಥ್, ಜಯಶಂಕರ್, ರಾಮಣ್ಣ, ತಿಮ್ಮಣ್ಣ, ಮೋಹನ್, ತಿಪ್ಪಣ್ಣ ಲಕ್ಷ್ಮಣ್ ಗೋವಿಂದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಭಕ್ತ ಸಮೂಹ ಸುಮಾರು 45 ಲಕ್ಷ ರೂಗಳ ವೆಚ್ಚ ಹೊಸದಾದ ಕಾರನ್ನು ಶ್ರೀಗಳು ಅರ್ಪಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap